ವ್ಯಾಯಾಮ ಸಾಕು ಎಂದಿದ್ದೇ ತಪ್ಪಾಗೋಯ್ತಾ..?? ಅಷ್ಟಕ್ಕೆ ತಾಯಿಯನ್ನ ಕೊಂದ..
ಹೈದರಾಬಾದ್ : ತೆಲಂಗಾಣದ ಹೈದ್ರಾಬಾದ್ ನಲ್ಲಿ ಮಗನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿಯನ್ನ ಕೊಲೆಗೈದ ಘಟನೆ ನಡೆದಿದೆ.. ವ್ಯಾಯಾಮ ಮಾಡಿದ್ದು ಸಾಕು ನಿಲ್ಲಿಸು ಎಂದು ಹೇಳಿದ್ದಕ್ಕೇ… 24 ವರ್ಷದ ಯುವಕ ತಾಯಿಯನ್ನು ಹೊಡೆದು ಕೊಂದಿದ್ದಾನೆ.. ಈ ಘಟನೆ ಸುಲ್ತಾನ್ ಬಜಾರ್‌ನಲ್ಲಿ ನಡೆದಿದೆ.
ಕೊಂಡಾ ಪಾಪಮ್ಮ ಮೃತ ತಾಯಿಯಾಗಿದ್ದಾರೆ. 24 ವರ್ಷದ ಕೊಂಡಾ ಸುಧೀರ್ ಕುಮಾರ್ ಆರೋಪಿಯಾಗಿದ್ದಾನೆ. ಸುಧೀರ್ ಕುಮಾರ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಸದ್ಯ ಈತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನವರಿ 24ರ ತಡರಾತ್ರಿ 2 ಗಂಟೆಗೆ ಈತ ವ್ಯಾಯಾಮ ಮಾಡುತ್ತಿದ್ದನಂತೆ. ಈ ವೇಳೆ ಸುಧೀರ್ ಕುಮಾರ್ ಗೆ ಆತನ ತಾಯಿ ಮಗನನ್ನು ಮಲಗುವಂತೆ ಹೇಳಿದ್ದಾರೆ. ಆದರೆ ಕೋಪಗೊಂಡ ಸುಧೀರ್ ತನ್ನ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್‌ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ.
ಕೊಂಡಾ ಸುಧೀರ್ ಶಿಕ್ಷಣ ಮುಗಿಸಿದ ಬಳಿಕ ಒಂದು ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ವರ್ಷದ ಹಿಂದೆ ಆ ಕೆಲಸವನ್ನೂ ಬಿಟ್ಟು ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಮಾನಸಿಕ ಸ್ಥಿತಿ ಹದಗೆಟ್ಟಿತ್ತುಯ ಎನ್ನಲಾಗಿದೆ.. ಹೀಗಾಗಿ ಈತನಿಗೆ ಇತ್ತೀಚೆಗೆ ಕೋಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂಬುದನ್ನ ಪೊಲೀಸರು ತಿಳಿಸಿದ್ದಾರೆ.
son killed mother for asking to stop workout at midnight