Mangalore: Love Marriage ಗೆ ವಿರೋಧಿಸಿದಕ್ಕೆ ತಂದೆಯನ್ನೇ ಕೊಂದ ಮಗ
1 min read
Love Marriage ಗೆ ವಿರೋಧಿಸಿದಕ್ಕೆ ತಂದೆಯನ್ನೇ ಕೊಂದ ಮಗ
ದಕ್ಷಿಣ ಕನ್ನಡ: ಪ್ರೀತಿಸಿ ಮದುವೆಯಾಗಿದ್ದನ್ನು ವಿರೋಧಿಸಿದ್ದಕ್ಕೆ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಬೆಳ್ತಂಡಿ ತಾಲೂಕಿನ ಗರ್ಡಾಡಿ ನಡೆದಿದೆ.
ನಡು ಮುಡ್ಯೊಟ್ಟು ನಿವಾಸಿ ಶ್ರೀಧರ (59) ಮೃತ ದುರ್ದೈವಿ. ಮಗ ಹರೀಶ್ ಪೂಜಾರಿ (28) ಕೊಲೆ ಆರೋಪಿ. ಈ ಸಂಭಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಘಟನೆ ಒಂದು ವರ್ಷದ ಹಿಂದೆ ನಡೆದಿದ್ದು, 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹರೀಶ್ ಪೂಜಾರಿ ಆರೋಪಿ ಎಂದು ತೀರ್ಪು ನೀಡಿದೆ.
ನಡೆದಿದ್ದು ಏನು? : ಹರೀಶ ಪುಜಾರಿ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದನು. ಆ ಯುವತಿ ಬೇರೆ ಜಾತಿಯವಳಾಗಿದ್ದು, ಈ ವಿಷಯವನ್ನು ಮನೆಯಲ್ಲಿ ಪ್ರಸ್ತಾಪಿಸಿದ್ದರ ಜೊತೆಗೆ ಮದುವೆಯಾಗುವುದಾಗಿಯೂ ಹೇಳಿದ್ದ. ಇದಕ್ಕೆ ಮನೆಯವರು ವಿರೋಧ ವ್ಯಕ್ತ ಪಡಡೆಸಿದ್ದು, ನಿಮ್ಮ ಸಹೋದರಿಯ ಮದುವೆಯಾಗುವರೆಗೂ ನಿನ್ನ ಮದುವೆ ಮಾಡುವುದಿಲ್ಲ ಎಂದು ತಂದೆ ಶ್ರೀಧರ ಪೂಜಾರಿ ಹೇಳಿದ್ದರು.
ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಹರೀಶ್ ಪೂಜಾರಿ 2021 ಜನೆವರಿಯಲ್ಲಿ ತನ್ನ ಪ್ರೀಯತಮೆ ಜೊತೆಗೆ ಓಡಿ ಹೋಗಿ ಮದುವೆಯಾಗಿದ್ದ. ಮದುವೆಯಾದ ಮೂರು ವಾರಗಳ ಬಳಿಕ ಹರೀಶ್ ಮನೆಗೆ ವಾಪಸ್ ಆಗಿದ್ದಾನೆ. ಆದರೆ ಮನೆಗ ಬಂದ ದಂಪತಿಗಳನ್ನು ಮನೆ ಒಳಗೆ ಸೇರಿಸಲು ವಿರೋಧ ವ್ಯಕ್ತವಾಗಿದೆ.
ನಂತರ ಜ. 18 ರಂದು ಮಧ್ಯಾಹ್ನ ಇದೇ ವಿಚಾರದಲ್ಲಿ ತಂದೆ ಮತ್ತು ಮಗನ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಹರೀಶ್ ತನ್ನ ತಂದೆ ಶ್ರೀಧರ ಪೂಜಾರಿಗೆ ಕೊಲೆ ಬೆದರಿಕೆ ಹಾಕಿದ್ದನು. ಅದೇ ದಿನ ಸಂಜೆ ತಂದೆ ಪೇಟೆಗೆ ಹೋಗಿ ಮನೆಗೆ ಬಂದಿದ್ದಾರೆ. ಮತ್ತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಕೋಪದಲ್ಲಿ ಹರೀಶ್ ಮರದ ಪಕ್ಕಾಸಿನಿಂದ ತನ್ನ ತಂದೆಯ ತಲೆ ಮತ್ತು ಮುಖಕ್ಕೆ ಹೊಡೆದಿದ್ದಾನೆ. ಪರಿಣಾಮ ಶ್ರೀಧರ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ, ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸಂದೇಶ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಆರೋಪಿ ಹರೀಶ್ ಪೂಜಾರಿ ದೋಷಿ ಎಂಬುದಾಗಿ ಸಾಬೀತಾಗಿದೆ ಎಂದು ತೀರ್ಪು ನೀಡಿ ಪ್ರಕರಣವನ್ನು ಮುಂದೂಡಿದರು. ಮುಂದಿನ ದಿನದಲ್ಲಿ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.