ಮುಂಬೈ : ಸೋನು ಸೂದ್…!! ಕಳೆದ ಕೆಲ ತಿಂಗಳಿನಿಂದ ಹಲವಾರು ಮಾನವೀಯ ಕಾರ್ಯಗಳನ್ನು ಮಾಡಿ ಜನರಿಂದ ರಿಯಲ್ ಹೀರೋ ಎಂದು ಕರೆಸಿಕೊಳ್ಳುತ್ತಿರುವ ನಟ. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿರುವ ಸೋನು ಸೂದ್, ಇದೀಗ ಮೂವರು ಮಕ್ಕಳನ್ನು ದತ್ತು ಪಡೆಯುವ ಮೂಲಕ ಮತ್ತೆ ಮಾನವೀತಯತೆ ಮೆರೆದಿದ್ದಾರೆ.
ಹೌದು..! ಆಂಧ್ರ ಪತ್ರಕರ್ತರೊಬ್ಬರು ಟ್ವಿಟ್ಟರ್ ನಲ್ಲಿ ಸೋನು ಸೂದ್ ಅವರನ್ನು ಟ್ಯಾಗ್ ಮಾಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಟ್ವೀಟ್ ನಲ್ಲಿ ‘ಭುವನಗಿರಿ ಜಿಲ್ಲೆಯ ಯಾದಾದ್ರಿ ಗ್ರಾಮದ ಈ ಮೂವರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಮೂವರು ಮಕ್ಕಳು ನೋಡಿಕೊಳ್ಳಲು ಹಿರಿಯರು ಯಾರು ಇಲ್ಲ. ಆದ್ದರಿಂದ ಇವರು ಅನಾಥರಾಗಿದ್ದಾರೆ. ಹೀಗಾಗಿ ಇವರಿಗೆ ದಯವಿಟ್ಟು ಸಹಾಯ ಮಾಡಿ’ ಎಂದು ಸೋನು ಸೂದ್ ಬಳಿ ಮನವಿ ಮಾಡಿಕೊಂಡಿದ್ದರು.
15 ನಿಮಿಷದೊಳಗೆ ಪ್ರತಿಕ್ರಿಯೆ
ಪತ್ರಕರ್ತ ಟ್ವೀಟ್ ಮಾಡಿದ 15 ನಿಮಿಷದೊಳಗೆ ಪ್ರತಿಕ್ರಿಯಿಸಿದ ಸೋನು ಸೂದ್,”ಅವರು ಇನ್ನು ಮುಂದೆ ಅನಾಥರಲ್ಲ. ಅವರು ನನ್ನ ಜವಾಬ್ದಾರಿಯಾಗುತ್ತಾರೆ” ಎಂದು ಭರವಸೆ ನೀಡಿದ್ದಾರೆ. ಅದರಂತೆ ಸೋನು ಸೂದ್ ತಮ್ಮ ಅಧಿಕಾರಿಗಳನ್ನು ಕಳುಹಿಸಿ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
They are no longer orphans.
They will be my responsibility ❣️ https://t.co/pT0hQd4nCx— sonu sood (@SonuSood) July 31, 2020