Sonakshi Sinha | ಸೋನಾಕ್ಷಿಗೆ ವಾರೆಂಟ್ ಜಾರಿ : ಏನಿದು ವಂಚನೆ ಪ್ರಕರಣ..?
ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
2019 ರಲ್ಲಿ ಕಾರ್ಯಕ್ರಮವೊಂದಕ್ಕಾಗಿ ಸೋನಾಕ್ಷಿ ಅವರನ್ನ ಮೊರಾದಾಬಾದ್ ಗೆ ಬರುವಂತೆ ಆಹ್ವಾನಿಸಲಾಗಿತ್ತು.
ಅದಕ್ಕಾಗಿ ಸೋನಾಕ್ಷಿ 37 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರಂತೆ. ಆದ್ರೆ ಸೋನಾಕ್ಷಿ ಅವರು ಈ ಕಾರ್ಯಕ್ರಮಕ್ಕೆ ಗೈರಾಗಿದ್ದರಂತೆ.
ಈ ಸಂಬಂಧ ಈವೆಂಟ್ ಆಯೋಜಕರು ಸೋನಾಕ್ಷಿ ಅವರಿಗೆ ಹಣವನ್ನು ಮರುಪಾವತಿ ಮಾಡುವಂತೆ ತಿಳಿಸಿದ್ದಾರೆ.
ಆದ್ರೆ ಹಣ ವಾಪಸ್ ನೀಡಲು ಸೋನಾಕ್ಷಿ ಮ್ಯಾನೇಜರ್ ನಿರಾಕರಿಸಿದ್ದಂತೆ. ಈ ಕುರಿತು ಈವೆಂಟ್ ಆಯೋಜನರು ಸೋನಾಕ್ಷಿ ಸಿನ್ಹಾ ಅವರಿಗೆ ಕರೆ ಮಾಡಿ ತಿಳಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲವಂತೆ.
ಹೀಗಾಗಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಜೊತೆಗೆ ವಿಚಾರಣೆಗೆ ಗೈರುಹಾಜರಾಗಿದ್ದರಂತೆ.
ಇದೀಗ ವಂಚನೆ ಪ್ರಕರಣದಲ್ಲಿ ನಟಿಯ ವಿರುದ್ಧ ಮೊರಾದಾಬಾದ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಅಷ್ಟೇ ಅಲ್ಲ, ಏಪ್ರಿಲ್ 25 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೋನಾಕ್ಷಿಗೆ ಕೋರ್ಟ್ ಸೂಚಿಸಿದೆ. Sonakshi Sinha warrant issued against the actress in a fraud case