ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಆನಂದ್ ಅಹೂಜಾ ಅವರ ತಂದೆ ಅಂದ್ರೆ ಸೋನಮ್ ಕಪೂರ್ ಮಾವನಿಗೆ ಸೈಬರ್ ಕಳ್ಳರು ಕೋಟಿ ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾರೆ.. ಹೌದು… ಸೋನಂ ಕಪೂರ್ ಮಾವ ನಡೆಸುತ್ತಿದ್ದ ಕಂಪನಿಯಲ್ಲಿ 27 ಕೋಟಿ ರೂ. ವಂಚನೆ ಮಾಡಲಾಗಿದ್ದು , ವಂಚಕರ ಜಾಲವನ್ನು ಹುಡುಕಿ ಸೈಬರ್ ಕ್ರಿಮಿನಲ್ ತಂಡವನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಸೋನಂ, ಮಾವ ಹರೀಶ್ ಅಹುಜಾ ಅವರು ಫರಿದಾಬಾದ್ ಮೂಲದ ಶಾಹಿ ಎಕ್ಸ್ ಪೋರ್ಟ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಇವರ ಕಂಪನಿಯ ರಾಜ್ಯ ಮತ್ತು ಕೇಂದ್ರ ತೆರಿಗೆಗಳ ರಿಯಾಯಿತಿ ಮತ್ತು ಲೆವಿಸ್ ಪರವಾನಗಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ವಂಚಕರು 27 ಕೋಟಿ ರೂ. ವಂಚಿಸಿದ್ದಾರೆ. ಈ ವಂಚಕರು ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರಗಳನ್ನು ಎನ್‍ಕ್ಯಾಶ್ ಮಾಡಿಕೊಂಡು ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ..
ಫರಿದಾಬಾದ್ ಉಪಪೊಲೀಸ್ ಆಯುಕ್ತ ನಿತೀಶ್ ಅಗರ್ವಾಲ್ ಪ್ರಕರಣ ಕುರಿತು ವಿವರಿಸಿದ್ದು, ಈ ROSCTL ಪರವಾನಗಿಗಳು ಹಲವಾರು ಲಕ್ಷ ರೂಪಾಯಿ ಮೌಲ್ಯದ ಡಿಜಿಟಲ್ ಕೂಪನ್‍ಗಳಿಗೆ ಹೋಲುತ್ತವೆ. ವಂಚಕರು ಅಹುಜಾ ಅವರ ಸಂಸ್ಥೆಯ ಡಿಜಿಟಲ್ ಕೂಪನ್ ಬಳಸಿಕೊಂಡು 27.61 ಕೋಟಿ ರೂ. ವಂಚಿಸಿದ್ದಾರೆ. ವಂಚಕರು ಈ ಕೂಪನ್‍ಗಳನ್ನು ಇತರ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಎನ್‍ಕ್ಯಾಶ್ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಆನಂದ್ ಅಹೂಜಾ ವಿರುದ್ಧ ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಗಂಭೀರ ಆರೋಪ ಹೊರಿಸಿತ್ತು.. ತೆರಿಗೆ ಮತ್ತು ಸುಂಕ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಆರೋಪ ಮಾಡಿತ್ತು..