National Herald Case – ನಾಳೆ ಮತ್ತೆ ವಿಚಾರಣೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಸೂಚನೆ…
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ಇಂದು ಅಂತ್ಯಗೊಂಡಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಇಡಿ ಕಚೇರಿಗೆ ಬಂದಿದ್ದ ಸೋನಿಯಾ ಗಾಂಧಿ ಅವರನ್ನ ಇಲ್ಲಿ ಎರಡು ಸುತ್ತು ವಿಚಾರಣೆ ನಡೆಸಲಾಗಿದೆ. ಮೊದಲ ಸುತ್ತಿನಲ್ಲಿ ಮಧ್ಯಾಹ್ನ 1.30ರವರೆಗೆ ವಿಚಾರಣೆ ನಡೆಸಲಾಯಿತು. ಊಟದ ನಂತರ ಸೋನಿಯಾ ಗಾಂಧಿ ಮತ್ತೆ 3.30 ರ ಸುಮಾರಿಗೆ ಇಡಿ ಕಚೇರಿಗೆ ಬಂದರು, ಅಲ್ಲಿ ಅವರನ್ನು ಸಂಜೆ 7 ರವರೆಗೂ ವಿಚಾರಣೆ ನಡೆಸಲಾಯಿತು. ನಾಳೆ ಮತ್ತೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸೂಚಿಸಿದೆ.
ಮತ್ತೊಂದೆಡೆ, ರಾಹುಲ್ ಗಾಂಧಿ ಮತ್ತು ಪಕ್ಷದ ಸಂಸದರು ಇ ಡಿ ವಿಚಾರಣೆಯನ್ನ ಖಂಡಿಸಿ ವಿಜಯ್ ಚೌಕ್ ಬಳಿ ಪ್ರತಿಭಟನೆ ನಡೆಸಿದರು. ನಂತರ ದೆಹಲಿ ಪೊಲೀಸರು ಅವರನ್ನ ವಶಕ್ಕೆ ತೆಗೆದುಕೊಂಡರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಬಿ ವಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ವೇಳೆ ಪೊಲೀಸರು ಆತನನ್ನ ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಶಕ್ತಿಸಿಂಹ ಗೋಹಿಲ್ ಸೇರಿದಂತೆ 50 ಸಂಸದರನ್ನು ಬಂಧಿಸಲಾಗಿದೆ. ಪೊಲೀಸರು ಈ ಸಂಸದರನ್ನು ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಎಲ್ಲ ಕಾಂಗ್ರೆಸ್ ಸಂಸದರು ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ದೆಹಲಿ ಪೊಲೀಸರು ಕೂಡ ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದಿದ್ದರು, ಆದರೆ ಸೋನಿಯಾ ಅವರ ವಿಚಾರಣೆ ಮುಗಿದ ನಂತರ ಪೊಲೀಸರು ರಾಹುಲ್ ಗಾಂಧಿಯನ್ನು ಬಿಡುಗಡೆ ಮಾಡಿದರು.








