Sonu Nigam : ಸೆಲ್ಫಿ ನೀಡಲು ನಿರಾಕರಿಸಿದ್ದಕ್ಕೆ ಗಾಯಕ ಸೋನು ನೀಗಮ್ ಮೇಲೆ MLA ಪುತ್ರನ ಹಲ್ಲೆ…
ಸಲ್ಫಿ ಕಾರಣಕ್ಕೆ ಸೆಲೆಬ್ರಿಟಿಗಳ ನಡುವೆ ಜಗಳ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಸೆಲ್ಫಿ ನೀಡಲಿಲ್ಲ ಎಂಬ ಕಾರಣಕ್ಕೆ ಬಾಲಿವುಡ್ ಗಾಯಕ ಸೋನು ನೀಗಮ್ ಅವರ ಮೇಲೆ ಶಿವಸೇನೆ ಶಾಸಕನ ಪುತ್ರರೊಬ್ಬರು ಹಲ್ಲೆ ಮಾಡಿರುವ ಘಟನೆ ತಡ ರಾತ್ರಿ ಮುಂಬೈನಲ್ಲಿ ನಡೆದಿದೆ. ಸೋಮವಾರ ರಾತ್ರಿ ಮುಂಬೈ ನಲ್ಲಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಸಿಂಗರ್ ಸೋನು ನಿಗಮ್ ತೆರಳಿದ್ದ ವೇಳೆ ಘಟನೆ ನಡೆದಿದೆ.
ಕಾರ್ಯಕ್ರಮ ಮುಗಿದ ನಂತರ ಹಲವಾರು ಜನ ಸೋನು ನೀಗಮ್ ಆವರ ಹಿಂದೆ ಬಿದ್ದಿದ್ದರು. ಅಲ್ಲಿದ್ದ ಸಿಬ್ಬಂಧಿಗಳು ತಡೆದಿದ್ದಾರೆ. ಈ ವೇಳೆ ಶಿವಸೇನಾ ಶಾಸಕ ಪ್ರಕಾಶ್ ಅವರ ಪುತ್ರ ಸ್ವಪ್ನಿಲ್ ಸೋನು ನೀಗಮ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸೋನು ನೀಗಮ್ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಸ್ವಪ್ನಿಲ್ ಮತ್ತು ಆತನ ಸಹಚರರು ಸೋನು ನೀಗಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಸೋನು ನೀಗಮ್ ಸಿಬ್ಬಂಧಿಯನ್ನ ಕೆಳಕ್ಕೆ ತಳ್ಳಿದ್ದಲ್ಲದೆ, ಸೋನು ಸ್ನೇಹತನನ್ನ ತಳ್ಳಿ ಹಲ್ಲೆ ನಡೆಸಿದ್ದಾರೆ.
ಶಿವಸೇನಾ ಶಾಸಕ ಪ್ರಕಾಶ್ ಅವರ ಪುತ್ರ ಸ್ವಪ್ನಿಲ್, ಸೋನು ನಿಗಮ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಸೋನು ನಿಗಮ್ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ವಿವಾದದ ಕುರಿತು ಶಿವಸೇನೆ ಶಾಸಕ ಪ್ರಕಾಶ್ ಮಾತನಾಡಿ ಇದೆಲ್ಲವೂ ಬೇಕು ಅಂತ ನಡೆದಿದ್ದಲ್ಲ, ಆಕಸ್ಮಿಕವಾಗಿ ಗಲಾಟೆ ಶುರುವಾಗಿದೆ ಎಂದು ಹೇಳಿದ್ದಾರೆ.
ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸೋನು ನಿಗಮ್ ಅವರನ್ನು ಬೆಂಬಲಿಸಿ ಮತ್ತು ಶಿವಸೇನಾ ಶಾಸಕ ಪ್ರಕಾಶ್ ಮತ್ತು ಅವರ ಪುತ್ರ ಸ್ವಪ್ನಿಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Sonu Nigam: MLA’s son attacked singer Sonu Nigam for refusing to take a selfie.