ಹುಟ್ಟೂರಿನ ವಿದ್ಯಾರ್ಥಿನಿಯರಿಗೆ  1000 ಸೈಕಲ್ ಗಳ ಕೊಟ್ಟ ಸೋನು..!

1 min read

ಹುಟ್ಟೂರಿನ ವಿದ್ಯಾರ್ಥಿನಿಯರಿಗೆ  1000 ಸೈಕಲ್ ಗಳ ಕೊಟ್ಟ ಸೋನು..!

ಪಂಜಾಬ್ : ಮೊದಲ ಲಾಕ್ ಡೌನ್ ನಿಂದಲೂ ಹಿಡಿದು ಇಲ್ಲಿಯರೆಗೂ ಜನರ ಕಷ್ಟಕ್ಕೆ ಸಹಾಯಕ್ಕೆ ನಿಂತಿರುವ ಸೋನು ಸೂದ್ , ತನ್ನ ಕೈಲಾದಷ್ಟೂ ಸಹಾಯ ಮಾಡ್ತಾ ಬಡವರಿಗೆ ನೆರವಾಗ್ತಾ ಬಂದಿದ್ದು , ರೀಲ್ ಲೈಫ್ ನಲ್ಲಿ ವಿಲ್ಲನ್ ಆದ್ರೂ ರಿಯಲ್ ಲೈಫ್ ನ ಹೀರೋ ಎನಿಸಿಕೊಂಡಿದ್ದಾರೆ..

ಇದೀಗ ಸೋನು ತಮ್ಮ ಹುಟ್ಟೂರಿನಲ್ಲಿ 1000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮಾಡುತ್ತಿದ್ದಾರೆ.. ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ನೀಡುವ, ‘ಮೊಗಾ ಕಿ ಭೇಟಿ’ ಹೆಸರಿನ ಆಂದೋಲನಕ್ಕೆ ಇಂದು ಚಾಲನೆ ನೀಡಿದ್ದಾರೆ.sonu sood saakshatv

ಸಹೋದರಿ ಮಾಳವಿಕಾ ಸೂದ್ ಜೊತೆ ಸೇರಿ ಸೋನು ಸೂದ್ ತಮ್ಮ ಹುಟ್ಟೂರಾದ ಪಂಜಾಬ್ ನ ಮೊಗಾದಲ್ಲಿ, 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ.sonu sood saakshatv

ಸೂದ್ ಚಾರಿಟಿ ಫೌಂಡೇಶನ್ ನೊಂದಿಗೆ ಮಾಳವಿಕಾ ಸೂದ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆ ಕುರಿತಾಗಿ ಮಾತನಾಡಿದ ಸೋನು ಸೂದ್, ಮನೆಯಿಂದ ಶಾಲೆಗೆ ಹೋಗುವುದು ತುಂಬಾ ದೂರವಾಗಿದ್ದು, ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದರು.. ಈ ಸಮಸ್ಯೆಯನ್ನು ಪರಿಹರಿಸಲು, ಸಹಾಯ ಮಾಡಲು 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್ ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ.

ಅಲ್ಲದೇ ನಮ್ಮ ಈ ಅಭಿಯಾನದಲ್ಲಿ ಸಾಮಾಜಿಕ ಕಾರ್ಯಕರ್ತರಿಗೂ ಸೈಕಲ್ಗಳನ್ನು ನೀಡುತ್ತೇವೆ ಎಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋನು ಜನಮನ ಗೆದ್ದಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd