IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ರಿಯಲ್ ಹೀರೋ…!
ಮುಂಬೈ: ಕಳೆದ ಲಾಕ್ ಡೌನ್ ವೇಳೆಯಿಂದ ಇಲ್ಲಿವರೆಗೂ ಸೋನೂ ಸೂದ್ ಬಾಲಿವುಡ್ ನಟ ಸೋನು ಸೂದ್ ಲೆಕ್ಕವಿಲ್ಲದಷ್ಟು ಜನರಿಗೆ ನೆರವಾಗಿದ್ದಾರೆ.. ನೆರವಾಗುತ್ತಿದ್ದಾರೆ… ಕೊರೊನಾ ಸೋಂಕಿತರಿಗೆ ಆಕ್ಸಿಜನ್ , ವಿದ್ಯಾರ್ಥಿಗಳಿಗೆ ನೆರವು , ವಲಸೆ ಕಾರ್ಮಿಕರಿಗೆ ಸಹಾಯ ಸೇರಿ ಅನೇಕ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು, ಬಡವರ ಪಾಲಿನ ರಿಯಲ್ ಹೀರೋ ಆಗಿದ್ದಾರೆ..
ಇದೀಗ ಮತ್ತೊಂದು ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ. IAS ಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡುವ ಮೂಲಕವಾಗಿ ಮತ್ತೊಂದು ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೆಹಲಿಯ ಯುವ ಸಂಘಟನೆಯ ದಿಯಾ ಹಾಗೂ ಸೋನು ಸೂದ್ ಒಟ್ಟಾಗಿ ಸಂಭವಂ ಎಂಬ ಯೋಜನೆ ಒಂದನ್ನು ಲಾಂಚ್ ಮಾಡಿದ್ದಾರೆ. ಇದರ ಅಡಿಯಲ್ಲಿ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಿದ್ಧವಾಗುತ್ತಿರುವ ಆಕಾಂಕ್ಷಿಗಳಿಗೆ ಉಚಿತವಾಗಿ ಕೋಚಿಂಗ್ ಸ್ಕಾಲರ್ ಶಿಪ್ ನೀಡಲಾಗುತ್ತದೆ.
ಐಎಎಸ್ ತಯಾರಿ ಮಾಡಬೇಕಾ ನೀವು? ಕೋಚೀಂಗ್ ಪಡೆಯಲು ಬಯಸುವವರು www.SoodCharityFoundation.org ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಜೂನ್ 30 ರಿಜಿಸ್ಟ್ರೇಷನ್‍ಗೆ ಕೊನೆಯ ದಿನವಾಗಿದೆ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.