ದೇಶಾದ್ಯಂತ ಆಮ್ಲಜನಕದ 18 ಘಟಕಗಳ ಸ್ಥಾಪಿಸುವ ಮಾತು ಕೊಟ್ಟ ರಿಯಲ್ ಹೀರೋ ಸೋನು ಸೂದ್..!
ಮುಂಬೈ : ಕಳೆದ ವರ್ಷ ಕೋವಿಡ್ ಅಲೆ ಲಾಕ್ ಡೌನ್ ನಂತರ ಶುರುವಾದ ಸೋನು ಸೂದ್ ಮಾನವೀಯತಾ, ಸಮಾಜಮುಖಿ ಕೆಲಸಗಳು ಈವರೆಗೂ ನಿಂತಿಲ್ಲ. ಕಷ್ಟ ಅಂತ ಬಂದೋರಿಗೆ ಕೈಲಾದ ಸಸಹಾಯ ಮಾಡದೇ ಬಿಡಲ್ಲ. ಬಡವ ಶ್ರೀಮಂತ ಅಂತ ನೋಡದೇ , ಜಾಗ ಯಾವುದೇ ಇರಲಿ , ಜನ ಯಾರೇ ಇರಲಿ ಕಷ್ಟಕ್ಕೆ ನೆರವಾಗಿ ಬಡವರ ಪಾಲಿನ ದೇವಾರಾಗಿದ್ದಾರೆ ರಿಯಲ್ ಹೀರೋ ಸೋನು ಸೂದ್..
ಬೆಡ್ ಕೊಡಿಸುವುದು , ಆಕ್ಸಿಜನ್ ಪೂರೈಕೆ, ವಿದ್ಯಾರ್ಥಿಗಳಿಗೆ ನೆರವಾಗುದು , ಆಹಾರ ಪೂರೈಕೆ ಹೀಗೆ ಅನೇಕರಿಗೆ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡ್ತಿರುವ ಸೋನು ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ.. ಅಭಿಮಾನಿಗಳು ಸಹೃದಯಿ ಸೋನು ಅವರನ್ನ ಆರಾಧಿಸುತ್ತಿದ್ದಾರೆ.
ಈ ನಡುವೆ ಸೋನು ಸೂದ್ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈಹಾಕಿದ್ದಾರೆ. ಹೌದು ಕೋವಿಡ್ 2ನೇ ಅಲೆ ವೇಳೆ ಎದುರಾಗಿರುವ ಆಮ್ಲಜನಕ ಸಮಸ್ಯೆ ಬಗ್ಗೆ ಮನಗಂಡಿರುವ ಸೋನು ಸೂದ್ ದೇಶಾದ್ಯಂತ ಆಮ್ಲಜನಕದ 18 ಘಟಕಗಳನ್ನು ಸ್ಥಾಪಿಸುವುದಾಗಿ ಮಾತು ಕೊಟ್ಟಿದ್ದಾರೆ.
ಮಂಗಳೂರು ಹಾಗೂ ಆಂಧ್ರ ಪ್ರದೇಶದ ಕರ್ನೂಲು ಮತ್ತು ನೆಲ್ಲೂರಿನಲ್ಲಿ ಅದಾಗಲೇ ಆಮ್ಲಜನಕದ ಘಟಕ ಸ್ಥಾಪನೆಯ ಕೆಲಸ ಆರಂಭಗೊಂಡಿದ್ದು, ಮಿಕ್ಕ ರಾಜ್ಯಗಳಲ್ಲೂ ಶೀಘ್ರ ಕೆಲಸ ಶುರುವಾಗಲಿದೆ ಎಂದಿದ್ದಾರೆ ಸೋನು.. ಕಳೆದ ಕೆಲ ತಿಂಗಳುಗಳಲ್ಲಿ ನಾವು ಬಹಳ ದೊಡ್ಡ ಸಮಸ್ಯೆಯೊಂದನ್ನು ಕಂಡಿದ್ದು, ನಾವೆಲ್ಲಾ ಆಮ್ಲಜನಕದ ಅಲಭ್ಯತೆಯನ್ನು ಎದುರಿಸುತ್ತಿದ್ದೇವೆ. ನಾನು ಹಾಗೂ ನನ್ನ ತಂಡ, ಆಮ್ಲಜನಕದ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಆಲೋಚನೆ ಮಾಡುತ್ತಿದ್ದವು. ಹೀಗಾಗಿ ಆಮ್ಲಜನಕದ ಘಟಕಗಳನ್ನು ಸಾಧ್ಯವಾದಷ್ಟು ಕಡೆಗಳಲ್ಲಿ ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ ಎಂದಿದ್ದಾರೆ.
ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶದ ಹಾಗೂ ಇನ್ನಿತರ ರಾಜ್ಯಗಳಲ್ಲಿ ಆಮ್ಲಜನಕದ ಘಟಕಗಳನ್ನು ಸ್ಥಾಪಿಸಲು ಸೋನು ಸೂದ್ ಮುಂದಾಗಿದ್ದಾರೆ. ಸೋನು ಸೂದ್ ಅವರ ಸಮಾಜಮುಖಿ ಕೆಲಸಗಳಿಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.