ಸ್ಪೈ ಜೆಟ್ ಮೇಲೆ ಸೋನು ಸೂದ್ ಭಾವಚಿತ್ರ..! ರಿಯಲ್ ಹೀರೋಗೆ ವಿಷೇಶ ಗೌರವ..!
ಮುಂಬೈ: ಲಾಕ್ ಡೌನ್ ವೇಳೆ ನಟ ಸೋನು ಸೂದ್ ಬಡಬಗ್ಗರು, ವಲಸೆ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗಿ, ವಿದ್ಯಾರ್ಥಿಗಳು, ರೈತರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ರಿಯಲ್ ಲೈಫ್ ನಲ್ಲಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಸೋನು ಸೂದ್ ಅವರಿಗೆ ಎಲ್ಲೆಡೆಯಿಂದ ಶ್ಲಾಘನೆ , ಮೆಚ್ಚುಗೆ ವ್ಯಕ್ತವಾಗ್ತಿದೆ. ಇದರ ಬೆನ್ನಲ್ಲೇ ಸೋನು ಅವರಿಗೆ ಖಾಸಗಿ ವಿಮಾನ ಸಂಸ್ಥೆಯೊಂದು ವಿಶೇಷವಾಗಿ ಗೌರವ ಸೂಚಿಸಿದೆ.
ಹೌದು ರೀಲ್ ನಲ್ಲಿ ವಿಲ್ಲನ್ ಆದ್ರೂ ನಿಜಜೀವನದಲ್ಲಿ ಅವರು ರಿಯಲ್ ಹೀರೋ ಎಂದು ಪ್ರೂವ್ ಮಾಡಿದ್ದಾರೆ. ಬಡವರ ಪಾಲಿನ ಹೀರೋ ಸೋನು ಸೂದ್ ಅವರ ಭಾವಚಿತ್ರವನ್ನ ವಿಮಾನದ ಮೇಲೆ ಹಾಕಲಾಗಿದೆ.
Remember coming from Moga to Mumbai on an unreserved ticket.
Thank you everyone for all the love. Miss my parents more. @flyspicejet pic.twitter.com/MYipwwYReG— sonu sood (@SonuSood) March 20, 2021
ವಿದೇಶಿ ವಿಮಾನ ಸಂಸ್ಥೆಯಿಂದ ಸೋನು ಸೂದ್ ಗೌರವ ಪಡೆದಿದ್ದು, ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸ್ಪೈಸ್ ಜೆಟ್ ಬೋಯಿಂಗ್-737 ವಿಮಾನದ ಮೇಲೆ ಸೋನು ಸೂದ್ ಅವರ ಒಂದು ಫೋಟೋವನ್ನು ಹಾಕಿ A salute to the savior sonu sood ( ರಕ್ಷಕ ಸೋನು ಸೂದ್ ಗೆ ಸಲಾಂ) ಎಂದು ಬರೆಯಲಾಗಿದ್ದು, ಇದು ದೇಶದ ಗಮನ ಸೆಳೆದಿದೆ.
ಈ ಬಗ್ಗೆ ಸೋನು ಸೂದ್ ಟ್ವೀಟ್ ಮಾಡಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇನ್ನೂ ಈ ಟ್ವೀಟ್ ಗೆ ಬಾಲಿವುಡ್ ಸ್ಟಾರ್ ನಟರು ಪ್ರತಿಕ್ರಿಯಿಸಿದ್ದಾರೆ. ಅವರೆಲ್ಲಿರಿಗೆ ಸೋನು ಸೂದ್ ಧನ್ಯವಾದಗಳನ್ನ ತಿಳಿಸಿದ್ದಾರೆ.
ವಿಶ್ವದಲ್ಲಿ ಖುಷಿಯಾಗಿರುವ ವಿಚಾರದಲ್ಲಿ ಭಾರತವನ್ನ ಹಿಂದಿಟ್ಟ ಪಾಕಿಸ್ತಾನ, ಚೈನಾ..!
ಇನ್ಮುಂದೆ ತುಂಡು ಬಟ್ಟೆ ಧರಿಸಿದವರಿಗೆ ಶಾಮ್ಲಜಿ ವಿಷ್ಣು ದೇವಸ್ಥಾಕ್ಕೆ ಪ್ರವೇಶವಿಲ್ಲ..!
ಅಸ್ಸಾಂ ಪ್ರವಾಹದಿಂದ ತೊಂದರೆಗೊಳಗಾದ ಜನರಿಗೆ ಪ್ರಧಾನಿ ಯಾಕೆ ದುಃಖಿಸಲಿಲ್ಲ – ಪ್ರಿಯಾಂಕಾ ಗಾಂಧಿ ವಾದ್ರಾ