ಪಾಟ್ನಾ : ಕೊರೊನಾ ಸಂಕಷ್ಟದಲ್ಲಿ ಸಿಲುಕಿದ್ದ ಎಷ್ಟೋ ಮಂದಿಯ ಕಷ್ಟಕ್ಕೆ ಸ್ಪಂದಿಸಿ ರಿಯಲ್ ಹೀರೋ ಎನಿಸಿಕೊಂಡಿರುವ ನಟ ಸೋನು ಸೂದ್, ಇದೀಗ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ ಮಾನವೀಯತೆ ಮರೆದಿದ್ದಾರೆ.
ಪ್ರವಾಹದಲ್ಲಿ ಜೀವನಾಧಾರವಾಗಿದ್ದ 2 ಎಮ್ಮೆಗಳನ್ನು ಕಳೆದುಕೊಂಡ ಬಡ ಕುಟುಂಬದ ನೆರವಿಗೆ ಸೋನು ಸೂದ್ ಧಾವಿಸಿದ್ದು, ಅವರಿಗಾಗಿ ಎಮ್ಮೆಗಳನ್ನು ಖರೀದಿ ಮಾಡಿದ್ದಾರೆ.
ಈ ಕುರಿತು ಫೋಟೊ ಶೇರ್ ಮಾಡಿ ಟ್ವೀಟ್ ಮಾಡಿರುವ ಸೂದ್, ಇವರಿಗಾಗಿ ಎಮ್ಮೆಯನ್ನು ಖರೀದಿ ಮಾಡಿದ ಸಂದರ್ಭದಲ್ಲಿ ಉಂಟಾದ ಸಂತಸ ನನ್ನ ಮೊದಲ ಕಾರು ಖರೀದಿ ಮಾಡಿದ ವೇಳೆಯೂ ಆಗಿರಲಿಲ್ಲ. ನಾನು ಬಿಹಾರಕ್ಕೆ ಭೇಟಿ ನೀಡಿದ ವೇಳೆ ಈ ಎಮ್ಮೆಯ ತಾಜಾ ಹಾಲನ್ನು ಕೂಡಿಯುತ್ತೇನೆ ಎಂದು ಬರೆದುಕೊಂಡಿದ್ದಾರೆ.
I was not as excited buying my first car as I was excited buying a new buffalo 🐃 for you.
Will drink a glass of fresh buffalo milk when I come to Bihar. ❤️ https://t.co/6I6azJZ3gZ— sonu sood (@SonuSood) August 21, 2020
ಬಿಹಾರದ ಭೋಲಾ ಗ್ರಾಮದ ಬಡ ಕುಟುಂಬ ಒಂದು ಪ್ರವಾಹದಲ್ಲಿ ಪುತ್ರ ಹಾಗೂ ಜೀವನಾಧರವಾಗಿದ್ದ ಎಮ್ಮೆಯನ್ನು ಕಳೆದುಕೊಂಡಿತ್ತು. ಟ್ವಿಟ್ಟರ್ ಮುಖೇನ ಇದರ ಮಾಹಿತಿ ಪಡೆದ ಸೋನು ಸೂದ್, ಎಮ್ಮೆಯನ್ನು ಖರೀದಿ ಮಾಡಿ ಕುಟುಂಬಕ್ಕೆ ತಲುಪಿಸಿದ್ದಾರೆ.