Bollywood : ಕನ್ನಡಿಗನ ಕಥೆ ‘ಸೂರರೈ ಪೊಟ್ರು’ ಹಿಂದಿಗೆ ರಿಮೇಕ್ …. ಹೀರೋ ಯಾರು..???
2022 ರಲ್ಲಿ ಬಾಲಿವುಡ್ ನ ಮೋಸ್ಟ್ ಬ್ಯುಸಿಯೆಸ್ಟ್ ನಟ ಅಕ್ಷಯ್ ಕುಮಾರ್… ಅತರಂಗಿರೇ , ಸೂರ್ಯವಂಶಿ ಸಕ್ಸಸ್ ನ ನಂತರ 2022 ರಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಕ್ಕಿ ಬ್ಯುಸಿಯಿದ್ದಾರೆ..
ಈಗಲೇ ಅಕ್ಷಯ್ ಕುಮಾರ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಸದ್ಯ ಇನ್ನೂ 4 – 5 ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿಯಿದ್ದಾರೆ… ಸಿನಿಮಾಗಳ ಚಿತ್ರೀಕರಣ ಇನ್ನೂ ನಡೆಯುತ್ತಿವೆ. ಅಂದ್ಹಾಗೆ ಅಕ್ಷಯ್ ಕುಮಾರ್ ಗೆ ಬಾಲಿವುಡ್ ಅಷ್ಟೇ ಅಲ್ಲದೇ ಭಾರತದಾದ್ಯಂತ ಫ್ಯಾನ್ಸ್ ಇದ್ದಾರೆ..
ಇದೀಗ ಅಕ್ಷಯ್ ಕುಮಾರ್ ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಕನ್ನಡಿಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹೌದು.. 2020ರ ನವೆಂಬರ್ ನಲ್ಲಿ ಬಿಡುಗಡೆ ಆಗಿದ್ದ ತಮಿಳಿನ ಸೂರರೈ ಪೊಟ್ರು ಸಿನಿಮಾ ಈಗ ಹಿಂದಿಗೆ ರೀಮೇಕ್ ಆಗುತ್ತಿದೆ. ತಮಿಳಿನಲ್ಲಿ ಸೂರ್ಯ ನಟಿಸಿದ್ದ ಪಾತ್ರದಲ್ಲಿ ಈಗ ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಅಂದ್ಹಾಗೆ ‘ಸೂರರೈ ಪೊಟ್ರು’ ಸಿನಿಮಾ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಕಥೆ. ಸೂರ್ಯ, ಗೋಪಿನಾಥ್ ಪಾತ್ರದಲ್ಲಿ ನಟಿಸಿದ್ದರು. ಈಗ ಅಕ್ಷಯ್ ಕುಮಾರ್ ಗೋಪಿನಾಥ್ ಪಾತ್ರದಲ್ಲಿ ನಟಿಸಲಿದ್ದಾರೆ.
soorarai pottru tamil film remake in hindi – akshya – lead role
ಕರ್ನಾಟಕದ ಹಾಸನದವರಾದ ಕ್ಯಾಪ್ಟನ್ ಗೋಪಿನಾಥ್ ಕಡಿಮೆ ಬೆಲೆಯ ವಿಮಾನ ಯಾನ ಸಂಸ್ಥೆ ಡೆಕ್ಕನ್ ಏವಿಯೇಷನ್ ಪ್ರಾರಂಭ ಮಾಡಿದ್ದರು. ‘ಸಿಂಪ್ಲಿ ಫ್ಲೈ’ ಹಾಗೂ ‘ಯು ಕೆನಾಟ್ ಮಿಸ್ ದಿ ಫ್ಲೈಟ್’ ಪುಸ್ತಕಗಳನ್ನು ಗೋಪಿನಾಥ್ ಬರೆದಿದ್ದಾರೆ. ಇದರಲ್ಲಿ ‘ಸಿಂಪ್ಲಿ ಫ್ಲೈ’ ಪುಸ್ತಕದಿಂದ ಪ್ರೇರಣೆ ಪಡೆದು ‘ಸೂರರೈ ಪೊಟ್ರು’ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದರು.
ಅಂದ್ಹಾಗೆ ತಮಿಳಿನಲ್ಲಿ ನಿರ್ದೇಶಿಸಿ ನಿರ್ಮಾಣ ಮಾಡಿದ್ದ ಸುಧಾ ಕೊಂಗರ ಅವರೇ ಹಿಂದಿಗೆ ರೀಮೇಕ್ ನಿರ್ದೇಶಿಸಲಿದ್ದಾರೆ ಎನ್ನುವುದು ವಿಶೇಷ.