Kohli – Ganguly | ಆತ ಗ್ರೇಟ್ ಕ್ರಿಕೆಟರ್.. ವಿರಾಟ್ ಬೆಂಬಲಕ್ಕೆ ದಾದಾ
ಫಾರ್ಮ್ ಕೊರತೆ ಎದುರಿಸುತ್ತಿರುವ ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಬೆಂಬಲಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಂತಿದ್ದಾರೆ.
ಕೊಹ್ಲಿ ಗ್ರೇಟ್ ಕ್ರಿಕೆಟರ್, ಶೀಘ್ರದಲ್ಲಿಯೇ ಅವರು ಫಾರ್ಮ್ ಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಟದಲ್ಲಿ ಇಂತಹ ಏರಿಳಿತಗಳು ಸಾಮಾನ್ಯ, ನಾನು ಕೂಡ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸಚಿನ್, ದ್ರಾವಿಡ್ ಕೂಡ ಒಂದಾನೊಂದು ಸಮಯದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದಾಗಿ ಗಂಗೂಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಸಾಧಿಸಿದ ಗೆಲುವುಗಳನ್ನು ಗಮನಿಸಿದ್ರೆ ಆತನ ಸಾಮರ್ಥ್ಯ ಏನು ಎಂಬೋದು ನಮಗೆ ಅರ್ಥವಾಗುತ್ತದೆ. ವಿರಾಟ್ ಕ್ವಾಲಿಟಿ ಬ್ಯಾಟರ್.

ಆದ್ರೆ ಪ್ರಸ್ತುತ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ . ಈ ವಿಷಯ ವಿರಾಟ್ ಕೂಡ ಗೊತ್ತಿದೆ. ನಿಜ ಹೇಳಬೇಕೆಂದರೇ ವಿರಾಟ್ ಕೊಹ್ಲಿ ಗ್ರೇಟ್ ಕ್ರಿಕೆಟರ್.
ತನ್ನ ಸ್ಥಾನಕ್ಕೆ ತಕ್ಕಂತೆ ಆತ ಬ್ಯಾಟ್ ಬೀಸುತ್ತಿಲ್ಲ ಎಂಬೋದು ವಿರಾಟ್ ಗೂ ಗೊತ್ತಿದೆ. ಇದೇ ಮುಂದುವರೆದರೇ ತನ್ನ ಕೆರಿಯರ್ ಏನಾಗುತ್ತದೆ ಅನ್ನೋದು ಕೂಡ ವಿರಾಟ್ ಗೆ ಗೊತ್ತಿದೆ.
ಆದ್ರೆ ವಿರಾಟ್ ಮತ್ತೆ ಫಾರ್ಮ್ ಗೆ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಗೆ ಆ ತಾಕತ್ತು ಕೂಡ ಇದೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವ ಇರುವ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಬರೋದು ದೊಡ್ಡ ವಿಷಯವಲ್ಲ ಎಂದಿದ್ದಾರೆ ಗಂಗೂಲಿ.
ಭವಿಷ್ಯದಲ್ಲಿ ಇನ್ನೂ ಕೆಲವರಿಗೆ ಇಂತಹ ಪರಿಸ್ಥಿತಿ ಎದುರಾಗಬಹುದು.
ಆಗ ವಿಮರ್ಷೆಗಳಿಗೆ ಕಿವಿ ಕೊಡದೇ ಎಲ್ಲಿ ತೊಂದರೇ ಆಗುತ್ತಿದೆ ಅನ್ನೋದನ್ನ ಅರಿತು ಸರಿಪಡಿಸಿಕೊಂಡು ಸಾಗಬೇಕು ಎಂದು ಗಂಗೂಲಿ ಸಲಹೆ ನೀಡಿದರು.