Sourav Ganguly | ಮುಗೀತಾ ಗಂಗೂಲಿಯ ದಾದಾಗಿರಿ
ಟೀಂ ಇಂಡಿಯಾ ಪರ ಆಡುವಾಗ ಕ್ಯಾಪ್ಟನ್ ಆಗಿ ಚಕ್ರ ತಿರುಗಿಸಿದ ಸೌರವ್ ಗಂಗೂಲಿ ಅಲಿಯಾಸ್ ದಾದಾ, ಬಿಸಿಸಿಐ ಬಿಗ್ ಬಾಸ್ ಆಗಿ ಕಳೆದ ಮೂರು ವರ್ಷಗಳಿಂದ ತಮ್ಮದೇಯಾದ ಚಕ್ರ ತಿರುಗಿಸಿದ್ದಾರೆ.
ಆದ್ರೆ ಕಾಲ ಎಂದಿಗೂ ಒಂದೇ ರೀತಿ ಇರುವುದಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದಿದ್ದ ಗಂಗೂಲಿಗೆ ನಿರಾಸೆಯಾಗಿದೆ.
ಎರಡು ಬಾರಿ ಅಧ್ಯಕ್ಷರಾಗುವ ಸಂಪ್ರದಾಯ ಬಿಸಿಸಿಐನಲ್ಲಿ ಇಲ್ಲ ಎಂದು ದಾದಾಗೆ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಕಡೆ ಐಪಿಎಲ್ ಚೇರ್ಮನ್ ಪದವಿಯನ್ನ ದಾದಾ ತಿರಸ್ಕರಿಸಿದ್ದು, ಐಸಿಸಿ ಪದವಿಯನ್ನೂ ಬೇಡ ಎಂದುಕೊಂಡಿದ್ದಾರೆ.
ಇದರೊಂದಿಗೆ ದಾದಾ ಕಥೆ ಇಲ್ಲಿಗೆ ಮುಕ್ತಾಯವಾದಂತೆ ಎಂದು ಕ್ರೀಡಾ ವಿಶ್ಲೇಷಕರು ವಾದಿಸಿದ್ದಾರೆ.
ಬಿಸಿಸಿಐಗೆ ಹೊಸ ಅಧ್ಯಕ್ಷರು ಬರಲಿದ್ದಾರೆ. ಹಳೆಯ ಅಧ್ಯಕ್ಷ ಸೌರವ್ ಗಂಗೂಲಿ ಅವರ ಬೀಳ್ಕೋಡುಗೆಗೆ ಬೋರ್ಡ್ ಕೂಡ ಸಿದ್ಧವಾಗಿದೆ ಇದೀಗ ಬಿಸಿಸಿಐ ಬಿಗ್ ಬಾಸ್ ರೇಸ್ ನಲ್ಲಿ ಕನ್ನಡಿಗ ರೋಜರ್ ಬಿನ್ನಿ ಹೆಸರು ಮುನ್ನಲೆಗೆ ಬಂದಿದೆ.
1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಬಿನ್ನಿಗೆ ಬಿಸಿಸಿಐ ಹಿರಿಯರು ಜೈ ಎಂದಿದ್ದಾರೆ.
ಅವರು ಈಗಾಗಲೇ ಅಧ್ಯಕ್ಷ ಪದವಿಗೆ ನಾಮಿನೇಷನ್ ಹಾಕಿದ್ದಾರೆ. ಮತ್ತೊಂದು ಕಡೆ ಕಾರ್ಯದರ್ಶಿಯಾಗಿ ಜೈ ಶಾ ಮುಂದುವರೆಯುವುದು ಪಕ್ಕಾ ಆಗಿದೆ. ಈ ತಿಂಗಳ 18 ರಂದು ಬಿಸಿಸಿಐ ಎಲೆಕ್ಷನ್ ನಡೆಯಲಿದೆ.
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿಯೇ ಉಳಿದುಕೊಂಡಿದ್ದ ದಾದಾ ಮತ್ತೊಮ್ಮೆ ಅಧ್ಯಕ್ಷರಾಗಲು ಬೋರ್ಡ್ ಉನ್ನತಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಬರುವ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುವುದರಿಂದ ಗಂಗೂಲಿ ಬಿಸಿಸಿಐ ಬಿಗ್ ಬಾಸ್ ಸ್ಥಾನದಲ್ಲಿ ಮುಂದುವರೆಯಲು ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಆದ್ರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜೈ ಶಾ ಕಣ್ಸೂಚನೆಯಂತೆ ನಡೆಯುವ ಬೋರ್ಡ್ ವರ್ಗಗಳು ಗಂಗೂಲಿಗೆ ಬೆಂಬಲ ಸೂಚಿಸುತ್ತಿಲ್ಲ.
ಜೊತೆಗೆ ಏಕಾಏಕಿ ರೋಜರ್ ಬಿನ್ನಿ ಹೆಸರನ್ನ ಮುನ್ನಲೆಗೆ ತಂದು ಗಂಗೂಲಿಗೆ ಐಪಿಎಲ್ ಕಮಿಷನರ್ ಪದವಿಯನ್ನು ನೀಡಲು ಮುಂದಾಗಿದ್ದರು.
ಆದ್ರೆ ಈಗಾಗಲೇ ಬೋರ್ಡ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ದಾದಾ ಒಂದು ಸಬ್ ಕಮಿಟಿಗೆ ಚೀಫ್ ಆಗುವುದಕ್ಕೆ ನಿರಾಕರಿಸಿದ್ದಾರೆ ಎಂದು ಬೋರ್ಡ್ ವರ್ಗಗಳು ತಿಳಿಸಿದ್ದಾರೆ.
ಇದರೊಂದಿಗೆ ಕಮಿಷನರ್ ಬ್ರಿಜೇಶ್ ಪಟೇಲ್ ಸ್ಥಾನದಲ್ಲಿ ಅವರು ಖಜಾಂಚಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಅವರನ್ನು ಐಪಿಎಲ್ ಕಮಿಷನರ್ ಆಗಿ ನೇಮಿಸುವ ಸಾಧ್ಯತೆಗಳಿವೆ.








