Sourav Ganguly | ಸಂಜು ಬಗ್ಗೆ ಗಂಗೂಲಿ ಹೇಳಿದ್ದೇನು ?
ಇತ್ತೀಚಿನ ಕಾಲದಲ್ಲಿ ಆತ ಅದ್ಭುತವಾಗಿ ಆಡುತ್ತಿದ್ದಾನೆ. ನಮ್ಮ ಪ್ರಣಾಳಿಕೆಯಲ್ಲಿ ಆತನ ಹೆಸರು ಇದೆ.
ರೆಗ್ಯೂಲರ್ ಆಗಿ ಟೀಂ ಇಂಡಿಯಾಗೆ ಆಡುತ್ತಾನೆ ಎಂದು ಸಂಜು ಸ್ಯಾಮ್ ಸನ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜು ಅದ್ಭುತವಾದ ಬ್ಯಾಟರ್ ಆದ್ರೆ ದುರಾದೃಷ್ಠ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಎಂದಿದ್ದಾರೆ.
ತಿರುವನಂತಪುರಂ ನಿಂದ ಸಾಕಷ್ಟು ಮಂದಿ ಒಳ್ಳೆ ಕ್ರಿಕೆಟರ್ಸ್ ಬಂದಿದ್ದಾರೆ.
ಕಳೆದ ರಣಜಿ ಟ್ರೋಫಿಯಲ್ಲಿ ರೋಹನ್ ಕನ್ನುಮಾನ್ ಮೂರು ಸೆಂಚೂರಿಗಳನ್ನು ಸಿಡಿಸಿದ್ರು.
ಇಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಆಟಗಾರರಿದ್ದಾರೆ.
ಬಾಸೆಲ್ ಥಂಪಿ ಇಲ್ಲಿನವರೇ, ನನಗೆ ಗೊತ್ತಿರುವಂತೆ ಸಂಜು ಸ್ಯಾಮ್ಸನ್ ಕೂಡ ತಿರುವನಂತಪುರಂನಿಂದಲೇ ಬಂದಿರಬಹುದು ಎಂದು ಗಂಗೂಲಿ ಹೇಳಿದ್ದಾರೆ.
ಇದೇ ವೇಳೆ ಸಂಜು ಸ್ಯಾಮ್ಸನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಂಗೂಲಿ, ಕಳೆದ ಕೆಲವು ದಿನಗಳಿಂದ ಸಂಜು ತಮ್ಮ ಬ್ಯಾಟಿಂಗ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಐಪಿಎಲ್ ನಲ್ಲಿ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಟೀಂ ಇಂಡಿಯಾದಲ್ಲಿ ಅವರು ಖಂಡಿತವಾಗಿ ರೆಗ್ಯೂಲರ್ ಆಟಗಾರರಾಗುತ್ತಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರನ್ನ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಗಂಗೂಲಿ ಹೇಳಿದ್ದಾರೆ.