ಅಂದು ಗಂಗೂಲಿಯ ಟೀಮ್ ಇಂಡಿಯಾ… ಇಂದು ರಾಹುಲ್ ದ್ರಾವಿಡ್ ನ ಯಂಗ್ ಇಂಡಿಯಾ..!
Sourav Ganguly lauds Rahul Dravid for doing ‘great job’ at NCA
ಭಾರತ ಕ್ರಿಕೆಟ್ ತಂಡಕ್ಕೆ ಟೀಮ್ ಇಂಡಿಯಾ ಅನ್ನೋ ಹೆಸರಿಟ್ಟಿದ್ದು ಸೌರವ್ ಗಂಗೂಲಿ. ಸೌರವ್ ಗಂಗೂಲಿಯ ಸಾರಥ್ಯದ ಕನಸಿನ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದು ಮಹೇಂದ್ರ ಸಿಂಗ್ ಧೋನಿ. ಎರಡು ವಿಶ್ವಕಪ್ ಗರಿ ಹಾಗೂ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಂಡಿದ್ದು ಧೋನಿ ನಾಯಕತ್ವದಲ್ಲಿ. \
ಧೋನಿಯ ನಂತರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮತ್ತಷ್ಟು ಯಶಸ್ಸಿನ ಉತ್ತುಂಗಕ್ಕೇರಿಸಿದ್ದರು. ಇದೀಗ ವಿರಾಟ್ ನಾಯಕತ್ವದ ಟೀಮ್ ಇಂಡಿಯಾವನ್ನು ಯಂಗ್ ಇಂಡಿಯಾವನ್ನಾಗಿಸಿಕೊಳ್ಳುವ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಕೊಡುಗೆ ಅಪಾರ
ಹೌದು, ಟೀಮ್ ಇಂಡಿಯಾ ಈಗ ಪಕ್ಕಾ ಯಂಗ್ ಇಂಡಿಯಾ.. ಯುವ ಕ್ರಿಕೆಟ್ ಆಟಗಾರರನ್ನು ತಯಾರು ಮಾಡುವ ಮೆಷಿನ್ ಥರಾ ಆಗಿದೆ ಭಾರತೀಯ ಕ್ರಿಕೆಟ್. ಹಾಗಂತ ವಿಶ್ವದ ಕ್ರಿಕೆಟ್ ಪಂಡಿತರು ಭಾರತೀಯ ಕ್ರಿಕೆಟ್ ನ ಯುವ ಆಟಗಾರರ ಪ್ರದರ್ಶನವನ್ನು ನೋಡಿ ಗುಣಗಾನ ಮಾಡುತ್ತಿದ್ದಾರೆ.
ಮೇಲ್ಮೋಟಕ್ಕೆ ಇದಕ್ಕೆಲ್ಲಾ ಕಾರಣ ಐಪಿಎಲ್ ಅಂತ ಹೇಳಲಾಗುತ್ತಿದೆ. ಅದು ಶೇ.50ರಷ್ಟು ಸತ್ಯ. ಯಾಕಂದ್ರೆ ಐಪಿಎಲ್ ನಲ್ಲಿ ಯುವ ಆಟಗಾರರಿಗೆ ಅವಕಾಶಗಳು ಸಿಗುತ್ತವೆ. ಅದನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಹಾಗೇ ಬಿಸಿಸಿಐ ಕೂಡ ಬೆಂಬಲ ನೀಡುತ್ತಿದೆ.
ಹಾಗಿದ್ರೆ ಇನ್ನು ಶೇ..50ರಷ್ಟು ಪಾಲು ಯಾರದ್ದು.. ಈ ಪ್ರಶ್ನೆಗೆ ಉತ್ತರ ಹೀಗಿದೆ. ಹೌದು, ಶೇ. 50ರಷ್ಟು ಪಾಲು ಸ್ಥಳೀಯ ಕ್ರಿಕೆಟ್ ಅಕಾಡೆಮಿಗಳದ್ದು, ರಾಜ್ಯ ಕ್ರಿಕೆಟ್ ಸಂಸ್ಥೆಗಳದ್ದು.. ಯುವ ಕ್ರಿಕೆಟಿಗರ ತರಬೇತುದಾರರದ್ದು, ಪೋಷಕರದ್ದು ಇದೆ.
ಅದಕ್ಕಿಂತ ಹೆಚ್ಚಾಗಿ ಒಬ್ಬರ ಪಾಲು ಜಾಸ್ತಿನೇ ಇದೆ. ಅದು ಟೀಮ್ ಇಂಡಿಯಾದ ಮಾಜಿ ಆಟಗಾರ, 19 ವಯೋಮಿತಿ ಮತ್ತು ಭಾರತ ಎ ತಂಡದ ಮಾಜಿ ಕೋಚ್ ಹಾಗೂ ಹಾಲಿ ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರದ್ದು.
ಟೀಮ್ ಇಂಡಿಯಾ ಇವತ್ತು ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರಬಹುದು. ನಾಯಕ ವಿರಾಟ್ ಕೊಹ್ಲಿ ಮತ್ತು ಹೆಡ್ ಕೋಚ್ ರವಿ ಶಾಸ್ತ್ರಿ ಹಾಗೂ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಇಝಿಯಾಗಿ ತಂಡವನ್ನು ಸದೃಢಗೊಳಿಸುತ್ತಿದ್ದಾರೆ.
ಆದ್ರೆ ಇದಕ್ಕೆ ಮುಖ್ಯ ಕಾರಣ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನನ. ರಾಹುಲ್ ದ್ರಾವಿಡ್ ಅವರ ದೂರದೃಷ್ಟಿಯ ಫಲವಾಗಿ ಟೀಮ್ ಇಂಡಿಯಾ ಇಂದು ಯಂಗ್ ಇಂಡಿಯಾ ಆಗಿ ಪರಿವರ್ತನೆಗೊಳ್ಳುತ್ತಿದೆ.
ಸ್ವಲ್ಪ ಗಮನಿಸಿ.. ಸದ್ಯದ ಟೀಮ್ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಶ್ವಿನ್, ಚೇತೇಶ್ವರ ಪೂಜಾರ, ಮಹಮ್ಮದ್ ಶಮಿ ಅವರನ್ನು ಹೊರತುಪಡಿಸಿ ಇನ್ನುಳಿದ ಆಟಗಾರರು ಬರೀ ಯುವಕರೇ.. ಈ ಮೇಲಿನ ಆಟಗಾರರ ವಯಸ್ಸು 30ಪ್ಲಸ್ ಆಗಿದೆ. ಇನ್ನುಳಿದ ಆಟಗಾರರು 21ರಿಂದ 30 ವಯಸ್ಸಿನಗೊಳಗಿನ ಆಟಗಾರರೇ.
ಇದ್ರಲ್ಲೂ ಬಹುತೇಕ ಆಟಗಾರರು ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ ಆಟಗಾರರು. ಅದ್ರಲ್ಲೂ ಕಳೆದ ಆರು ತಿಂಗಳಲ್ಲಿ ಟೀಮ್ ಇಂಡಿಯಾಗೆ ಐದಾರು ಆಟಗಾರರು ಎಂಟ್ರಿಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್, ಇಂಗ್ಲೆಂಡ್ ಸರಣಿಯಲ್ಲಿ ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಪ್ರಸಿದ್ಧ್ ಕೃಷ್ಣ.. ಇವರು ನೀಡಿರುವ ಪ್ರದರ್ಶನವನ್ನು ಬಣ್ಣಿಸಲು ಸಾಧ್ಯವಿಲ್ಲ. ಎಲ್ಲವೂ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಗಳೇ…
ಒಬ್ಬರಿಗಿಂತ ಒಬ್ಬರು ಮೀಗಿಲು ಎಂಬಂತೆ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾವನ್ನು ಆಯ್ಕೆ ಮಾಡೋದು ಆಯ್ಕೆಗಾರರಿಗೆ ತಲೆನೋವವಾಗಿ ಪರಿಣಮಿಸಿದೆ. ಹಾಗೇ ಹನ್ನೊಂದರ ಬಳಗವನ್ನು ಆಯ್ಕೆ ಮಾಡೋದು ಟೀಮ್ ಮ್ಯಾನೇಜ್ ಮೆಂಟ್ ಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
ಒಂದು ಕಾಲದಲ್ಲಿ ಸಚಿನ್, ಸೆಹ್ವಾಗ್, ರಾಹುಲ್, ಗಂಗೂಲಿ, ಲಕ್ಷ್ಮನ್, ಯುವರಾಜ್ ಸಿಂಗ್, ಧೋನಿ ಜಹೀರ್, ಹರ್ಭಜನ್, ಅನಿಲ್ ಕುಂಬ್ಳೆ ತಂಡದ ಖಾಯಂ ಆಟಗಾರರು ಅಗಿದ್ದರು. ಆದ್ರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಯಾರು ಕೂಡ ತಂಡಕ್ಕೆ ಖಾಯಂ ಆಟಗಾರರು ಅಂತ ಹೇಳುವ ಹಾಗಿಲ್ಲ. ಶ್ರೇಷ್ಠ ಮಟ್ಟದ ಪ್ರದರ್ಶನ ನೀಡು ಇಲ್ಲ ಅಂದ್ರೆ ಹೊರಗಡೆ ನಡಿ ಎಂಬಂತೆ ಆಗಿದೆ. ಯಾಕಂದ್ರೆ ಟೀಮ್ ಇಂಡಿಯಾದ ಗರ್ಭಗುಡಿ ಪ್ರವೇಶಿಸಲು ಯುವ ಆಟಗಾರರು ಸಾಲು ಸಾಲಾಗಿ ಕ್ಯೂನಲ್ಲಿ ನಿಂತಿದ್ದಾರೆ. ಥ್ಯಾಂಕ್ಯೂ ರಾಹುಲ್ ದ್ರಾವಿಡ್. ವಿಶ್ವ ಮಟ್ಟದಲ್ಲಿ ಟೀಮ್ ಇಂಡಿಯಾವನ್ನು ಉನ್ನತ ಮಟ್ಟಕ್ಕೇರಿಸಿರುವುದಕ್ಕೆ…
#Sourav Ganguly #rahuldravid #teamindia #youngindia #viratkohli #mahendrasingh dhoni #rahuldravid #saakshatv #sports #bcci