ವಿರಾಟ್ ಅಟ್ಟಿಟ್ಯೂಡ್ ಇಷ್ಟ.. ಆದ್ರೆ ಕೋಪ ಹೆಚ್ಚು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ವರದಿಯಾಗುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ಕೆಲ ಬೆಳವಣಿಗೆಗಳು ಕೂಡ ನಡೆದಿದೆ.
ಈ ಮಧ್ಯೆ ವಿರಾಟ್ ಕೊಹ್ಲಿ ವರ್ತನೆಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಡಿ ಹೊಗಲಿದ್ದಾರೆ.
ದಾದಾ ಗುರುಗ್ರಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಂಗೂಲಿಗೆ ನೀವು ಯಾವ ಕ್ರಿಕೆಟಿಗನ ವರ್ತನೆಯನ್ನು ಹೆಚ್ಚು ಇಷ್ಟಪಟ್ಟಿದ್ದೀರಿ ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ಗಂಗೂಲಿ ಉತ್ತರವಾಗಿ, ಕೊಹ್ಲಿ ಹೆಸರು ಹೇಳಿದರು. ”ನನಗೆ ವಿರಾಟ್ ಕೊಹ್ಲಿ ವರ್ತನೆ ತುಂಬಾ ಇಷ್ಟ. ಅವರು ಸಾಕಷ್ಟು ಹೋರಾಟದ ಮನೋಭಾವವನ್ನು ತೋರಿಸುತ್ತಾರೆ. ಆದರೆ ಕೋಪ ಹೆಚ್ಚಿದೆ ಎಂದಿದ್ದಾರೆ.