ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜೈಲು ಸೇರಿದ ಬೆನ್ನಲ್ಲೇ ಭುಗಿಲೆದ್ದ  ಹಿಂಸಾಚಾರ –  ಇಲ್ಲಿವರೆಗೂ 72 ಸಾವು

1 min read

ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜೈಲು ಸೇರಿದ ಬೆನ್ನಲ್ಲೇ ಭುಗಿಲೆದ್ದ  ಹಿಂಸಾಚಾರ –  ಇಲ್ಲಿವರೆಗೂ 72 ಸಾವು

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ  ಜೈಲು ಸೇರಿದ ಬೆನ್ನಲ್ಲೇ ಗಲಭೆ , ಹಿಂಸಾಚಾರ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿಯವರೆಗೂ ಸುಮಾರು 72 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಅವರಿಗೆ 15 ತಿಂಗಳ ಜೈಲು ಶಿಕ್ಷೆಯಾಗಿದೆ. ಈ ನಂತರ ಗಲಭೆ ಉಂಟಾಗಿದ್ದು, ಪರಿಸ್ಥಿತಿ ತೀವ್ರ ವಿಷಮವಾಗಿದೆ.

ಅಲ್ಲದೇ ಪ್ರತಿಭಟನೆ – ಗಲಭೆಯಲ್ಲಿ ಪಾಲ್ಗೊಂಡಿದ್ದ 1,234 ಮಂದಿಯನ್ನು ಬಂಧಿಸಲಾಗಿದೆ. ಜೋಹಾನ್ಸ್‌ಬರ್ಗ್‌ ಹೊರವಲಯದ ಸೊವೆಟೊದಲ್ಲಿ ಗಲಭೆಕೋರರು ಲೂಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿದ್ದಾರೆ. ಕ್ವಾಜುಲು–ನಟಾಲ್‌ ಪ್ರಾಂತ್ಯದಲ್ಲಿ ನಡೆದ ಗಲಭೆ, ಹಿಂಸಾಚಾರದಲ್ಲಿ 27 ಜನರು ಮೃತಪಟ್ಟಿದ್ದಾರೆ.

ಕನ್ವರ್ ಯಾತ್ರೆಗೆ ಅವಕಾಶ ನೀಡಿದ ಉತ್ತರಪ್ರದೇಶ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದ ಸುಪ್ರೀಂಕೋರ್ಟ್

ಗೌಟೆಂಗ್‌ ಪ್ರಾಂತ್ಯದಲ್ಲಿ 45 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮೂರು ಪ್ರಾಂತ್ಯಗಳಲ್ಲಿನ ಗಲಭೆ, ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆ 72ಕ್ಕೇರಿದಂತಾಗಿದೆ. ಗೌಟೆಂಗ್‌ ಹಾಗೂ ಕ್ವಾಜುಲು–ನಟಾಲ್‌ ಪ್ರಾಂತ್ಯಗಳಲ್ಲಿ ಕಳೆದ ಐದು ದಿನಗಳಿಂದ ಗಲಭೆ, ಅಂಗಡಿಗಳ ಲೂಟಿ ನಡೆಯುತ್ತಿದೆ. ಮಂಗಳವಾರವೂ ಈ ಪ್ರಾಂತ್ಯಗಳಲ್ಲಿ ಅಂಗಡಿಗಳ ಲೂಟಿ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಅಧ್ಯಕ್ಷ ಸಿರಿಲ್‌ ರಾಮಫೊಸಾ ಅವರು ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd