Dharwad | ಆರು ದಿನ ಮುಂಚಿತವಾಗಿ ಬಂದ ನೈಋತ್ಯ ಮುಂಗಾರು
ಧಾರವಾಡ : ಜುಲೈ ಎಂಟರ ವೇಳೆ ಬರಬೇಕಿದ್ದ ನೈಋತ್ಯ ಮುಂಗಾರು ಆರು ದಿನಗಳ ಮುಂಚಿತವಾಗಿಯೇ ಆಗಮಿಸಿದೆ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ನೈಋತ್ಯ ಮುಂಗಾರು ಜುಲೈ ಎಂಟರ ವೇಳೆ ವಾಯುವ್ಯ ಭಾಗಕ್ಕೆ ತಲುಪುತ್ತದೆ.
ಆದ್ರೆ ಈ ವರ್ಷ ಆರು ದಿನಗಳ ಮುಂಚಿತವಾಗಿಯೇ ಆಗಮಿಸಿದೆ.

ಆದ್ರೆ ಉತ್ತರ ಕರ್ನಾಟಕದ ಪ್ರದೇಶದಲ್ಲಿ ಮುಂಗಾರು ಇನ್ನೂ ದುರ್ಬಲವಾಗಿದ್ದು, ಅಲ್ಲಲ್ಲಿ ಕಡಿಮೆ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.
ಜೂನ್ ನಿಂದ ಇಲ್ಲಿಯವರೆಗೆ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿ ಎನ್ ಐಕೆ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮತ್ತು ಅತಿ ಕೊರತೆಯ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.