ಮಗಳಿಗಾಗಿ ಸಿಗರೇಟು ಸೇವನೆ ತ್ಯಜಿಸಿದ್ದ ಎಸ್.ಪಿ ಬಾಲಸುಬ್ರಹ್ಮಣ್ಯಂ
ಚೆನ್ನೈ, ಸೆಪ್ಟೆಂಬರ್26: ಗಾಯಕರು ತಮ್ಮ ಸುಮಧುರ ಸ್ವರಕ್ಕೆ ಹಾನಿಕಾರಕವೆಂದು ಪರಿಗಣಿಸುವ ಅನೇಕ ನೆಚ್ಚಿನ ಆಹಾರ ಪದಾರ್ಥಗಳನ್ನು ತ್ಯಜಿಸುತ್ತಾರೆ.
ಆದರೆ, ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಎಲ್ಲಾ ತರಹದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು. ನೆಲಗಡಲೆ, ತೆಂಗಿನಕಾಯಿ, ಐಸ್‌ಕ್ರೀಮ್‌ಗಳು, ಸಿಹಿತಿಂಡಿಗಳು, ಸೋಡಾಗಳು, ಮತ್ತು ಅವಕಾಯಾ (ಪ್ರಸಿದ್ಧ ಆಂಧ್ರ ಮಸಾಲೆಯುಕ್ತ ಮಾವಿನ ಉಪ್ಪಿನಕಾಯಿ) ವರೆಗೂ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಸವಿಯುತ್ತಿದ್ದರು.
ನಾನು ಮಾಂಸಾಹಾರಿ ಆಹಾರವನ್ನು ಹೊರತುಪಡಿಸಿ ನಿರ್ಬಂಧವಿಲ್ಲದೆ ಎಲ್ಲವನ್ನೂ ತಿನ್ನುತ್ತೇನೆ. ಯಾವುದೇ ಆಹಾರ ಪದಾರ್ಥಗಳು ನನ್ನ ಧ್ವನಿಗೆ ಹಾನಿ ಮಾಡಿಲ್ಲ ಎಂದು ಎಸ್‌ಪಿಬಿ ಒಮ್ಮೆ ಹೇಳಿದ್ದರು.
ಕನ್ನಡವೆಂದರೆ ತಲೆ ಬಾಗುತ್ತಿದ್ದ ಎಸ್ ಪಿಬಿ ಜಗ ಮರೆಯದ ನಿಜ ಕಲಾವಿದ
ಎಸ್‌ಪಿಬಿ ಅವರಿಗೆ ಹಲವು ವರ್ಷಗಳ ಹಿಂದೆ ಸಿಗರೇಟಿನ ಅಭ್ಯಾಸ ಕೂಡ ಇತ್ತು. ಆದರೆ ಒಂದು ದಿನ ಅದನ್ನು ಬಿಟ್ಟುಬಿಟ್ಟರು.
ನನಗೆ ಹಿಂದೆ ಸಿಗರೇಟಿನ ಚಟವಿತ್ತು. ಆದರೆ ನನ್ನ ಮಗಳು ಒಮ್ಮೆ ನನ್ನನ್ನು ಬೇಡಿಕೊಂಡಾಗ ನಾನು ನಿಲ್ಲಿಸಿದೆ ಎಂದು ಎಸ್‌ಪಿಬಿ ಮೂರು ವರ್ಷಗಳ ಹಿಂದೆ ಜನಪ್ರಿಯ ತೆಲುಗು ಟಿವಿ ಟಾಕ್ ಶೋವೊಂದರಲ್ಲಿ ಹೇಳಿದ್ದರು.
ಎಸ್‌ಪಿಬಿ ತೆಗೆದುಕೊಂಡ ಮತ್ತೊಂದು ದೊಡ್ಡ ನಿರ್ಧಾರ ಕೂಡ ಅವರ ಧ್ವನಿಗೆ ಹಾನಿಕಾರಕವಾಗಬಹುದಿತ್ತು. ಹಲವಾರು ವರ್ಷಗಳ ಹಿಂದೆ, ಅವರು ಗಂಟಲಿನ ಶಸ್ತ್ರಚಿಕಿತ್ಸೆ ಗೆ ಒಳಗಾಗಿದ್ದರು.
ಬದುಕಿನ ಪೂರ್ತಿ ಅನೇಕ ಗುರುಗಳು; ಯಶ ಸಿಕ್ಕ ನಂತರ ಶಾಸ್ತ್ರೀಯ ಸಂಗೀತ ಕಲಿಕೆ – ಇದು ಎಸ್ ಪಿ ಬಿ ಯಶೋಗಾಥೆ
ಶಸ್ತ್ರಚಿಕಿತ್ಸೆ ಅತ್ಯುತ್ತಮ ಆಯ್ಕೆ ಎಂದು ನಾನು ಭಾವಿಸಿದೆ. ಲತಾ ಮಂಗೇಶ್ಕರ್ ಜಿ ಇದನ್ನು ತಿಳಿದು ನನ್ನನ್ನು ಕರೆದು ಅಂತಹ ಶಸ್ತ್ರಚಿಕಿತ್ಸೆ ಮಾಡದಂತೆ ಸಲಹೆ ಕೂಡ ನೀಡಿದ್ದರು. ಆದರೆ ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಅದೃಷ್ಟವಶಾತ್, ನನ್ನ ಧ್ವನಿ ಹಾಗೇ ಇತ್ತು ಎಂದು ಎಸ್‌ಪಿಬಿ ಹೇಳಿಕೊಂಡಿದ್ದರು.








