ರಾಯಚೂರು : ಮಣ್ಣೆತ್ತಿನ ಅಮವಾಸ್ಯೆ ಮತ್ತು ಕಂಕಣ ಸೂರ್ಯಗ್ರಹಣ ಗೋಚರವಾಗಲಿರುವ ಹಿನ್ನೆಲೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ. ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ಹೋಮ ಹವನ,ಆರತಿ ನಡೆಯಲಿದ್ದು, ಪೂಜಾ ಕಾರ್ಯಕ್ರಮದಲ್ಲಿ ಶ್ರೀಮಠದ ಸಿಬ್ಬಂದಿ ಮಾತ್ರ ಭಾಗಿಯಾಗಲಿದ್ದಾರೆ.
ಸರಿಸುಮಾರು 1 ಗಂಟೆ 30 ನಿಮಿಷ ನಿರಂತರವಾಗಿ ಸೂರ್ಯಗ್ರಹಣ ಶಾಂತಿ ಹೋಮ ನಡೆಸಲಾಗುತ್ತದೆ. ನಂತರ ಶ್ರೀಮಠದ ಸ್ವಚ್ಛತಾ ಕಾರ್ಯ ನಡೆಯಲಿದೆ. ಆ ಬಳಿಕ ರಾಯರ ವೃಂದಾವನ ಹಾಗೂ ಮೂಲ ರಾಮ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ..