ಮಹಾಮಾರಿ ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಯಾವ ಬಿರುದು ನೀಡಿದರೂ ಕಡಿಮೆಯೇ. ಇದನ್ನು ಮನಗಂಡ ಅಮೆರಿಕದ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರು ಮಾರಕ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ವೈದ್ಯೆ ಡಾ.ಉಮಾ ಮಧುಸೂದನ್ ಅವರಿಗೆ ‘ಡ್ರೈವ್ ಆಫ್ ಹಾನರ್’ ಗೌರವ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ದೂರದ ಅಮೆರಿಕೆಯಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ಕನ್ನಡತಿ ಡಾ.ಉಮಾ ಮಧುಸೂದನ್ ಅಲ್ಲಿನ ಜನರ ಹಾಗೂ ಸರಕಾರದ ಮೆಚ್ಚುಗೆಗೆ ಪಾತ್ರರಾಗಿ ‘ಡ್ರೈವ್ ಆಫ್ ಹಾನರ್ ‘ ವಿಶೇಷ ಗೌರವ ಪಡೆದು ಕೊಳ್ಳುತ್ತಿದ್ದಾರೆ.
ಸೇವೆ,ಸಮರ್ಪಣೆ ನಮ್ಮ ಕನ್ನಡನಾಡಿನ ಹಿರಿಮೆ ಎಂದು ಸಾರುತ್ತಿರುವ ಈ ಹೆಣ್ಣು ಮಗಳನ್ನು ಅಭಿನಂದಿಸುವೆ.— B.S.Yediyurappa (@BSYBJP) April 22, 2020
ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್ ವೈ, ಕನ್ನಡ ನಾಡಿನ ಹಿರಿಮೆ ಸಾರುತ್ತಿರುವ ಹೆಣ್ಣುಮಗಳನ್ನು ಅಭಿನಂದಿಸುವುದಾಗಿ ಬರೆದುಕೊಂಡಿದ್ದಾರೆ.
ಟ್ವೀಟ್ ನಲ್ಲೇನಿದೆ..?
“ದೂರದ ಅಮೆರಿಕದಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ಕನ್ನಡತಿ ಡಾ.ಉಮಾ ಮಧುಸೂದನ್ ಅಲ್ಲಿನ ಜನರ ಹಾಗೂ ಸರಕಾರದ ಮೆಚ್ಚುಗೆಗೆ ಪಾತ್ರರಾಗಿ ‘ಡ್ರೈವ್ ಆಫ್ ಹಾನರ್’ ವಿಶೇಷ ಗೌರವ ಪಡೆದು ಕೊಳ್ಳುತ್ತಿದ್ದಾರೆ. ಸೇವೆ, ಸಮರ್ಪಣೆ ನಮ್ಮ ಕನ್ನಡನಾಡಿನ ಹಿರಿಮೆ ಎಂದು ಸಾರುತ್ತಿರುವ ಈ ಹೆಣ್ಣು ಮಗಳನ್ನು ಅಭಿನಂದಿಸುವೆ” ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕ ಓಕ್ ಲ್ಯಾಂಡ್ ನ ಸೌತ್ ವಿಂಡ್ಸರ್ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಡಾ.ಉಮಾ ಮಧುಸೂದನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.








