ಲಾಹೋರ್: ಪತ್ನಿ ಮಾಡಿದ ಕೋಳಿ ಸಾರಿನ ಖಾರ ಮಿತವಾಗಿದೆ. ಚಿಕನ್‌ಗೆ ಖಾರ ಮಾಸಾಲೆ ಯಾಕೆ ಹಾಕಿಲ್ಲ ಎಂದು ಪತ್ನಿಯನ್ನು ಪತಿರಾಯ ಬಿಲ್ಡಿಂಗ್ ಮೇಲಿಂದ ತಳ್ಳಿರುವ ಘಟನೆ ನಡೆದಿದೆ.
ಪಾಕಿಸ್ತಾನದ ಲಾಹೋರ್ ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ಮೊದಲ ಮಹಡಿಯಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಚಿಕನ್‌ಗೆ ಖಾರ ಮಸಾಲೆ ಅರೆದಿಲ್ಲ ಅನ್ನೋ ಕಾರಣಕ್ಕೆ ಪತ್ನಿಯ್ನು ಮೊದಲ ಮಹಡಿಯಿಂದ ಹೊರದಬ್ಬಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪತಿ, ಪತಿಯ ಸಹೋದರ ಹಾಗೂ ತಾಯಿಯನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ.
ಚಿಕನ್‌ಗೆ ಮಸಾಲೆ ಖಾರ ಇರಬೇಕು ಅನ್ನೋದು ಪತಿ ಹಾಗೂ ಆತನ ಕುಟುಂಬಸ್ಥರ ಷರತ್ತು. ಆದರೆ ಹಲವು ಬಾರಿ ಪತಿ ಮಾಡಿದ ಕೋಳಿ ಸಾರು ಖಾರವಿದ್ದಿರಲಿಲ್ಲ ಎಂದು ಜಗಳ ಶುರುವಾಗಿದೆ. ತನ್ನ ಸೂಚನೆ, ಹಲವು ಎಚ್ಚರಿಕೆಯನ್ನೂ ಕಡೆಗಣಿಸಲಾಗಿದೆ ಎಂದು ಪತಿ ಹಾಗೂ ಪತಿಯ ತಾಯಿ ಆಕ್ರೋಶಗೊಂಡಿದ್ದಾರೆ. ಬಳಿಕ ಜಗಳ ಶುರುವಾಗಿದೆ. ಆನಂತರ ಪತಿಯೊಂದಿಗೆ ಆತನ ಸಹೋದರ ಹಾಗೂ ಅತ್ತೆ ಮುಗಿಬಿದ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಜಗಳ ತಾರಕಕ್ಕೇರಿದೆ.ಬಾಲ್ಕನಿ ಬದಿಯಲ್ಲಿದ್ದ ಪತ್ನಿಯನ್ನು ಕೆಳಕ್ಕೆ ತಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮಹಿಳೆ ಮೇಲಿಂದ ಬಿದ್ದ ಮುರಿತಕ್ಕೊಳಗಾದ ದೃಶ್ಯಗಳು ಸೆರೆಯಾಗಿವೆ. ನೆರೆ ಮನೆಯವರು ಓಡಿ ಬಂದು ಮಹಿಳೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.








