SpiceJet shares – 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸ್ಪೈಸ್ ಜೆಟ್ ಕಂಪನಿಯ ಶೇರುಗಳು….
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯ ವಿಮಾನಗಳಲ್ಲಿ ಕಳೆದ ಕೆಲವು ವಾರಗಳಿಂದ ತಾಂತ್ರಿಕ ದೋಷ ಮುಂದುವರೆಯುತ್ತಿರುವುದರಿಂದ ಸ್ಪೈಸ್ ಜೆಟ್ ಶೇರುಗಳ ಮೌಲ್ಯ ಸತತವಾಗಿ ಕುಸಿಯುತ್ತಲೇ ಇದೆ. ಬುಧವಾರ ಸಹ ಸ್ಪೈಸ್ ಜೆಟ್ ಶೇರುಗಳು ಕುಸಿದಿತ್ತು 52 ವಾರಗಳ ಕನಿಷ್ಠ ಮಟ್ಟ 35 ರುಪಾಯಿಗೆ ಕುಸಿದಿದೆ. ಒಟ್ಟು 7% ಗಳಷ್ಟುಶೇರುಗಳು ಕುಸಿತ ಕಂಡಿವೆ.
ಇಂಧನ ಟ್ಯಾಂಕ್ ನ ಸೂಚಕ ಅಸಮರ್ಪಕವವಾಗಿ ಕಾರ್ಯ ನಿರ್ವಹಿಸಿದ್ದರಿಂದ ದುಬೈ ಗೆ ತಲುಪಬೇಕಿದ್ದ ವಿಮಾನ ಕರಾಚಿಗೆ ತಲುಪಿತ್ತು. ಇದರ ನಂತರ ಮಂಗಳವಾರದ ಶೇರುಪೇಟೆಯಲ್ಲಿ 2% ಶೇರುಗಳು ಕುಸಿದಿದ್ದವು.
ಇನ್ನೊಂದೆಡೆ ಅದೇ ದಿನ 23,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಬಜೆಟ್ ಕ್ಯಾರಿಯರ್‌ನ ಮತ್ತೊಂದು ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕುಗಳು ಉಂಟಾಗಿದ್ದರಿಂದ ಮುಂಬೈನಲ್ಲಿ ತುರ್ತು ಭೂಸ್ಪರ್ಷ ಮಾಡಬೇಕಾಯಿತು. ಇದರಿಂದಾಗಿ ವಿಮಾನಯಾನ ಸಂಸ್ಥೆಗೆ ಹೊಡೆತ ಬಿದ್ದಿದೆ.
ಕಳೆದ ಕೆಲವು ವಾರಗಳಿಂದ ಇಂಥಹ 7 ಘಟನೆಗಳು ನಡೆದಿದ್ದು ಸ್ಪೈಸ್ ಜೆಟ್ ವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಧಿಕಾರಿಗಳ ಪ್ರಕಾರ, ಏವಿಯೇಷನ್ ರೆಗ್ಯುಲೇಟರ್ ಎಲ್ಲಾ 7ಅ ಅವಘಡಗಳ ಬಗ್ಗೆ ತನಿಖೆ ನಡೆಸುತ್ತಿದೆ. SpiceJet going through turbulent phase, share slumps over 40% in 2022