ಪೊಲೀಸರಿಗೆ ಉಗುಳುವುದು ಪ್ರತಿಭಟನೆಯ ವಿಧಾನವೇ : BJP ಪ್ರಶ್ನೆ
1 min read
karnataka bjp-tweet-Agnipath protest saaksha tv
ಪೊಲೀಸರಿಗೆ ಉಗುಳುವುದು ಪ್ರತಿಭಟನೆಯ ವಿಧಾನವೇ : BJP ಪ್ರಶ್ನೆ
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಸೌಜನ್ಯದ ಗಡಿ ಮೀರುತ್ತಿದೆ.
ಪೊಲೀಸರಿಗೆ ಉಗುಳುವುದು, ಕೊರಳ ಪಟ್ಟಿ ಹಿಡಿಯುವುದು ಪ್ರತಿಭಟನೆಯ ವಿಧಾನವೇ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ರಾಹುಲ್ ಗಾಂಧಿ ಅವರನ್ನ ಇಡಿ ವಿಚಾರಣೆಯನ್ನು ವಿರೋಧಿಸಿ ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನ ಖಂಡಿಸಿ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಸೌಜನ್ಯದ ಗಡಿ ಮೀರುತ್ತಿದೆ. ಪೊಲೀಸರಿಗೆ ಉಗುಳುವುದು, ಕೊರಳ ಪಟ್ಟಿ ಹಿಡಿಯುವುದು ಪ್ರತಿಭಟನೆಯ ವಿಧಾನವೇ?

ಕಾಂಗ್ರೆಸ್ಸಿಗರೇ, ನಿಮ್ಮ ವರ್ತನೆ ನಿಮ್ಮ ಸಂಸ್ಕಾರವನ್ನು ಹೇಳುತ್ತಿದೆ.ಕಾನೂನು ಸುವ್ಯವಸ್ಥೆಯನ್ನು ಹದೆಗೆಡಿಸುವುದು ನಿಮ್ಮ ಜನ್ಮಜಾತ ಕಾಯಿಲೆಯೇ ಎಂದು ಪ್ರಶ್ನಿಸಿದೆ.
ಇನ್ನು ನ್ಯಾಷನಲ್ ಹೆರಾಲ್ಡ್ ದೊಡ್ಡ ಪ್ರಕರಣವಲ್ಲ, ಕಿರುಕುಳ ನೀಡಲು ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಹೌದು ಡಿಕೆಶಿ ಅವರೇ, ಬೇನಾಮಿ ಮೂಲಕ ನೀವೊಬ್ಬರೇ 800 ಕೋಟಿಗೂ ಹೆಚ್ಚು ಸಂಪಾದಿಸಿರುವಾಗ ನಕಲಿ ಗಾಂಧಿ ಕುಟುಂಬದ #NationalHeraldCase ನಿಮ್ಮ ದೃಷ್ಟಿಯಲ್ಲಿ ದೊಡ್ಡದಾಗಲು ಹೇಗೆ ಸಾಧ್ಯ? ಚೋರ ಗುರು- ಚಾಂಡಾಲ ಶಿಷ್ಯ ಎಂದು ವ್ಯಂಗ್ಯವಾಡಿದೆ.