ಆಡಳಿತ ಕ್ಕಿಂತ ‘ಸಂಪುಟ’ ಸರ್ಕಸ್ ಮುಖ್ಯನಾ : ಸರ್ಕಾರಕ್ಕೆ ಎಸ್ ಆರ್ ಪಾಟೀಲ್ ಪ್ರಶ್ನೆ
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂಕಷ್ಟದಲ್ಲಿರುವ ರಾಜ್ಯದ ಜನತೆಗಿಂತ ಸಂಪುಟ ರಚನೆಯೇ ಪ್ರಮುಖವಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಸ್ ಆರ್ ಪಾಟೀಲ್ ಅವರು, ಆಡಳಿತ’ಕ್ಕಿಂತ ‘ಸಂಪುಟ’ ಸರ್ಕಸ್ ಮುಖ್ಯನಾ..? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಕೊರೋನಾ, ಕಂಡರಿಯದ ಪ್ರವಾಹದಿಂದ ರಾಜ್ಯದ ಜನತೆ ಕಂಗೆಟ್ಟು ಹೋಗಿದ್ದಾರೆ.
ಕನ್ನಡಪರ ಹೋರಾಟಗಾರರನ್ನು ರೋಲ್‍ಕಾಲ್, ನಕಲಿ ಎಂದು ಟೀಕಿಸಿದ ಯತ್ನಾಳ್..!
ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಸಮಸ್ಯೆಯನ್ನು ಬಗೆಹರಿಸಿ ಆಡಳಿತದ ಕಡೆಗೆ ಗಮನ ಕೊಡಬೇಕು.ಆದರೆ, ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಂಪುಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ಸರ್ಕಾರದ ಸಚಿವರುಗಳೂ ಕೂಡ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲೇ ನಿರತರಾಗಿದ್ದಾರೆ.
ಇನ್ನಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ನಾಯಕರು ಸಂಪುಟ ಸರ್ಕಸ್ ಕೈಬಿಟ್ಟು ಆಡಳಿತದ ಕಡೆ ಗಮನ ಕೊಟ್ಟು ರಾಜ್ಯವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಎಸ್ ಆರ್ ಪಾಟೀಲ್ ಅವರು ಒತ್ತಾಯಿಸಿದ್ದಾರೆ.
ಮರಾಠ ಸಮುದಾಯವನ್ನು ಪ್ರೀತಿಸೋಣ ಎಂದ ಡಿಸಿಎಂ ಲಕ್ಷ್ಮಣ್ ಸವದಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










