IPL 2022- SRH | ಸನ್ ರೈಸರ್ಸ್ ತಂಡಕ್ಕೆ ಆಘಾತ.. ಕೋಚ್ ರಾಜೀನಾಮೆ srh-assistant-coach-simon-katich-resigns saaksha tv
IPL 2022- SRH : IPL-2022 ಋತುವಿನ ಆರಂಭಕ್ಕೂ ಮುನ್ನ, ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ.
ತಂಡದ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜು-2022 ರಲ್ಲಿ ಹೈದರಾಬಾದ್ ಫ್ರಾಂಚೈಸಿ ಅನುಸರಿಸಿದ ತಂತ್ರಗಳು ಇಷ್ಟವಾಗದ ಕಾರಣ ಸೈಮನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಆಟಗಾರರ ಆಯ್ಕೆ ಮತ್ತು ಖರೀದಿ ವಿಚಾರದಲ್ಲಿ ಮ್ಯಾನೇಜ್ ಮೆಂಟ್ ಜತೆಗಿನ ಭಿನ್ನಾಭಿಪ್ರಾಯಗಳು ಬಂದ ಹಿನ್ನೆಲೆಯಲ್ಲಿ ಸೈಮನ್ ತಂಡವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ದಿ ಆಸ್ಟ್ರೇಲಿಯನ್ನ ಲೇಖನವೊಂದನ್ನು ಪ್ರಕಟಿಸಿದೆ.
ಕಳೆದ ಋತುವಿನಲ್ಲಿ ಸನ್ರೈಸರ್ಸ್ ಕಳಪೆ ಪ್ರದರ್ಶನ ನೀಡಿ ಟೀಕೆಗಳನ್ನು ಎದುರಿಸಿತ್ತು.
14 ಪಂದ್ಯಗಳನ್ನಾಡಿದ ಹೈದರಾಬಾದ್ ಕೇವಲ ಮೂರರಲ್ಲಿ ಗೆದ್ದಿದೆ. ಪಾಯಿಂಟ್ಸ್ ಟೇಬಲ್ನ ಕೊನೆಯ ಸ್ಥಾನ ಪಡೆದುಕೊಂಡಿತ್ತು.
ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಿದ್ದು ಕೂಡ ತಂಡದ ಮೇಲೆ ಪ್ರಭಾವ ಬೀರಿತ್ತು.
ಮೆಗಾ ಹರಾಜಿನಲ್ಲಿ ಹೈದರಾಬಾದ್ ತಂಡದ ತಂತ್ರಗಳಿಗೆ ಸ್ವತಃ ಅಭಿಮಾನಿಗಳೇ ಬೇಸರಗೊಂಡಿದ್ದಾರೆ.









