SRH vs PBKS Match preview : ಹೈದರಾಬಾದ್ ತಂಡದ ಪ್ಲೇಯಿಂಗ್ 11
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮ್ಯಾಚ್ ನಂಬರ್ 28ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ.
ಮಧ್ಯಾಹ್ನ 3.30ಕ್ಕೆ ಡಿ.ವೈ. ಪಾಟೀಲ್ ಅಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ.
ಕೇನ್ ವಿಲಿಯಂ ಸನ್ ಅವರ ನಾಯಕತ್ವ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಮೂರು ಗೆಲುವುಗಳೊಂದಿಗೆ ಉತ್ತಮ ಫಾರ್ಮ್ ನಲ್ಲಿದೆ.
ಆರಂಭದ ಎರಡು ಸೋಲುಗಳ ಬಳಿಕ ಗೆಲುವಿನ ಟ್ರ್ಯಾಕ್ ಗೆ ಬಂದಿರುವ ಹೈದರಾಬಾದ್ ತಂಡ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಾಂಘಿಕ ಪ್ರದರ್ಶನ ನೀಡುತ್ತಿದೆ.
ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದೆ.
ಕೇನ್ ವಿಲಿಯಂ ಸನ್, ರಾಹುಲ್ ತ್ರಿಪಾಟಿ, ಐಡನ್ ಮಾರ್ಕ್ರಾಂ, ಟಿ ನಟರಾಜನ್ ತಂಡದ ಟ್ರಂಪ್ ಕಾರ್ಡ್ ಆಟಗಾರರಾಗಿದ್ದಾರೆ.
ಅಭಿಷೇಕ್ ಶರ್ಮಾ, ನಿಕೋಲಸ್ ಪೂರನ್ ಕೂಡ ಉತ್ತಮ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಶಶಾಂಕ್ ಸಿಂಗ್ ಕೂಡ ತಂಡಕ್ಕೆ ನೆರವಾಗುತ್ತಿದ್ದಾರೆ.
ಇತ್ತ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ರನ್ ಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಜಾನ್ಸೆನ್ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಉಮ್ರಾನ್ ಮಲಿಕ್ ತಮ್ಮ ವೇಗದ ಮೂಲಕ ಡೆತ್ ಓವರ್ ಗಳಲ್ಲಿ ಎದುರಾಳಿಗಳಿಗೆ ಭಯ ಹುಟ್ಟಿಸುತ್ತಿದ್ದಾರೆ.
ಟಿ ನಟರಾಜನ್ ಪವರ್ ಪ್ಲೇ ಮತ್ತು ಡೆತ್ ಓವರ್ ಗಳಲ್ಲಿ ತಮ್ಮ ಯಾರ್ಕರ್ ಗಳ ಮೂಲಕ ಎದುರಾಳಿಗನ್ನು ಕಟ್ಟಿಹಾಕುತ್ತಿದ್ದಾರೆ.
ಸನ್ ರೈಸರ್ಸ್ ಹೈದ್ರಬಾದ್ ಪ್ಲೇಯಿಂಗ್ ಇಲೆವೆನ್
ಕೇನ್ ವಿಲಿಯಮ್ಸನ್ (ನಾಯಕ)
ಅಭಿಷೇಕ್ ಶರ್ಮಾ
ರಾಹುಲ್ ತ್ರಿಪಾಠಿ
ಆಡೇನ್ ಮಾಕ್ರ್ರಮ್
ನಿಕೊಲಾಸ್ ಪೂರನ್
ಶಶಾಂಕ್ ಸಿಂಗ್
ಸುಚೀತ್
ಭುವನೇಶ್ವರ್ ಕುಮಾರ್
ಮಾಕ್ರೊ ಜಾನ್ಸೆನ್
ಉಮ್ರಾನ್ ಮಲ್ಲಿಕ್
ಟಿ. ನಟರಾಜನ್