PBKS vs SRH Match | ಡೆಡ್ ಮ್ಯಾಚ್ ನಲ್ಲಿ ಪಂಜಾಬ್ – ಹೈದರಾಬಾದ್ ಗುಡ್ಡಾಟ
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಕಟ್ಟಕಡೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಇದು ಇಂದು ರೀತಿಯಾಗಿ ಡೆಡ್ ಮ್ಯಾಚ್ ಆಗಿದೆ. ಆದ್ರೆ ಆರನೇ ಸ್ಥಾನಕ್ಕಾಗಿ ಉಭಯ ತಂಡಗಳ ನಡುವೆ ಫೈಟ್ ನಡೆಯಲಿದೆ.
ಈ ಪಂದ್ಯ ವಾಂಖೆಡೆಯಲ್ಲಿ ನಡೆಯಲಿದ್ದು, ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯಕ್ಕೆ ಯಾವುದೇ ಮಹತ್ವ ಇಲ್ಲ. ಈ ಸೀಸನ್ ನಲ್ಲಿ ಈ ಎರಡೂ ತಂಡಗಳು ಸೆಕೆಂಡ್ ಟೈಂ ಎದುರುಬದುರಾಗಲಿದೆ.
ಕೇನ್ ವಿಲಿಯಂ ಸನ್ ನಾಯಕತ್ವ ಸನ್ ರೈಸರ್ಸ್ ತಂಡ ಈ ಸೀಸನ್ ನಲ್ಲಿ 13 ಪಂದ್ಯಗಳನ್ನಾಡಿದೆ. ಈ ಪೈಕಿ ಆರು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಸಾಧಿಸಿದ್ದು, ಇನ್ನುಳಿದ ಪಂದ್ಯದಲ್ಲಿ ಸೋಲು ಕಂಡಿದೆ.
ಹೀಗಾಗಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಪಂಜಾಬ್ ತಂಡ 13 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಕಳೆದ ಪಂದ್ಯಗಳ ರಿಸಲ್ಟ್ ಬಗ್ಗೆ ಮಾತನಾಡಿದ್ರೆ, ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಿತ್ತು.
ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಮೂರು ರನ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಪ್ರಿಯಂ ಗಾರ್ಗ್ 46 ರನ್, ರಾಹುಲ್ ತ್ರಿಪಾಟಿ 76 ರನ್ ಗಳಿಸಿದ್ದರು.
ಮತ್ತೊಂದು ಕಡೆ ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣಸಿದ್ದು, 17 ರನ್ ಗಳಿಂದ ಸೋಲು ಕಂಡಿದೆ. ಆದ್ರೂ ಈ ಪಂದ್ಯದಲ್ಲಿ ಜಿತೇಶ್ ಶರ್ಮಾ 44 ರನ್ ಗಳಿಸಿದ್ದರು.
ಇನ್ನು ಈ ಎರಡೂ ತಂಡಗಳು ಕಳೆದ ಬಾರಿ ಮುಖಾಮುಖಿಯಾಗಿದ್ದಾಗ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಏಳು ವಿಕೆಟ್ ಗಳಿಂದ ಸೋಲಿಸಿತ್ತು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೆ
ರಾಹುಲ್ ತ್ರಿಪಾಠಿ ಮತ್ತು ಅಭಿಷೇಕ್ ಶರ್ಮಾ ಬ್ಯಾಟಿಂಗ್ ನಲ್ಲಿ ಮಿಂಚಿದ್ದಾರೆ. ಉಮ್ರನ್ ಮಲಿಕ್ ಫಾಸ್ಟ್ ಅಂಡ್ ಫ್ಯುರಿಯಸ್ ಆಗಿ ಇಂಪ್ಯಾಕ್ಟ್ ಮಾಡಿದ್ದಾರೆ.
ಕೇನ್ ವಿಲಿಯಂ ಸನ್ ನ್ಯೂಜಿಲೆಂಡ್ ಗೆ ಮರಳಿರುವುದರಿಂದ ಗ್ಲೇನ್ ಪಿಲಿಪ್ಸ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲಿದ್ದಾರೆ. ಜೊತೆಗೆ ಗಾರ್ಗ್, ಐಡಂ ಮಾರ್ಕ್ರಾಂ, ನಿಕೋಲಸ್ ಪೂರನ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ಇನ್ನು ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲ್ಲಿಕ್ ವೇಗದ ಅಸ್ತ್ರಗಳಾಗಿದ್ದಾರೆ. ಇವರಿಗೆ ಫರೂಕ್, ವಾಷಿಂಗ್ ಟನ್ ಸುಂದರ್ ಇವರಿಗೆ ಸಾಥ್ ನೀಡಬೇಕಿದೆ.
ಪಂಜಾಬ್ ಕಿಂಗ್ಸ್ ತಂಡದ ವಿಚಾರಕ್ಕೆ ಬಂದರೇ ಪಂಜಾಬ್ ತಂಡದಲ್ಲಿ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಶಿಖರ್ ಧವನ್, ಜಾನಿ ಬೈರ್ ಸ್ಟೋ, ಭನುಕಾ ರಾಜಪಕ್ಸೆ, ಲಿಯಾಂ ಲಿವಿಂಗ್ ಸ್ಟೋನ್, ಜೀತೇಶ್ ಶರ್ಮಾ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಬೌಲಿಂಗ್ ನಲ್ಲಿ ಕಗಿಸೋ ರಬಾಡ, ಅರ್ಷದೀಪ್ ಸಿಂಗ್, ರಿಷಿ ಧವನ್ ವಿಕೆಟ್ ಟೇಕಿಂಗ್ ಬೌಲರ್ ಗಳಾಗಿದ್ದಾರೆ. srh vs pbks today match prediction