SRH vs RCB | ಹೆಡ್ ಟು ಹೆಡ್ ರೆಕಾರ್ಡ್ ನಲ್ಲಿ ಯಾರು ಬೆಸ್ಟ್.. ?
ಈ ಸೀಸನ್ ನಲ್ಲಿ ಹೈದರಾಬಾದ್ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದಾಗ ಸನ್ ರೈಸರ್ಸ್ ತಂಡ ಅಮೋಘ ಪ್ರದರ್ಶನ ನೀಡಿತ್ತು. ಬಲಿಷ್ಠ ಬ್ಯಾಟಿಂಗ್ ವಿಭಾಗವಿದ್ದ ಆರ್ ಸಿಬಿ ತಂಡವನ್ನು ಕೇವಲ 65 ರನ್ ಗಳಿಗೆ ಕಟ್ಟಿಹಾಕಿತ್ತು. ಹೀಗಾಗಿ ಇದೇ ಪ್ರದರ್ಶನವನ್ನು ಮುಂದುವರೆಸಲು ಹೈದರಾಬಾದ್ ಪ್ಲಾನ್ ಮಾಡಿಕೊಂಡಿದೆ. ಪ್ಲೇ ಆಫ್ಸ್ ದೃಷ್ಠಿಯಿಂದ ಆರ್ ಸಿಬಿ ಮತ್ತು ಎಸ್ ಆರ್ ಹೆಚ್ ತಂಡಗಳಿಗೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಇದು ಇಂಡಿಯನ್ ಪ್ರಿಮಿಯರ್ ಲೀಗ್ ನ 54 ನೇ ಪಂದ್ಯವಾಗಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಕಳೆದ ಬಾರಿ ಸೆಣಸಾಡಿದ್ದಾಗ ಆರ್ ಸಿಬಿ ತಂಡ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಎಸ್ ಆರ್ ಹೆಚ್ 9 ವಿಕೆಟ್ ಗಳಿಂದ ಜಯ ಸಾಧಿಸಿತ್ತು.
ಕೇನ್ ವಿಲಿಯಂ ಸನ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಆವೃತ್ತಿಯಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ. ಈ ಪೈಕಿ ಸನ್ ರೈಸರ್ಸ್ ತಂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಇತ್ತ ಫಾಫ್ ಡುಪ್ಲಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ ನಲ್ಲಿ 11 ಪಂದ್ಯಗಳನ್ನಾಡಿದೆ. ಇದರಲ್ಲಿ 6 ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಅಂದಹಾಗೆ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಇದರಲ್ಲಿ 21 ರನ್ ಗಳಿಂದ ಎಸ್ ಆರ್ ಹೆಚ್ ಸೋಲು ಕಂಡಿದೆ. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ 62 ರನ್, ಐಡನ್ ಮಾರ್ಕ್ರಾಂ 42 ರನ್ ಗಳಿಸಿದ್ದರು.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಆರ್ ಸಿಬಿ 13 ರನ್ ಗಳಿಂದ ಜಯ ಸಾಧಿಸಿತ್ತು. ಆರ್ ಸಿಬಿ ಪರ ಮಹಿಪಾಲ್ ಲೋಮ್ರೋರ್ 42 ರನ್ ಗಳಿಸಿದ್ರು.
ಹೆಡ್ ಟು ಹೆಡ್ ವಿಚಾರಕ್ಕೆ ಬಂದರೇ
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಈ ವರೆಗೂ ಆರ್ ಸಿಬಿ ಮತ್ತು ಎಸ್ ಆರ್ ಹೆಚ್ ತಂಡಗಳು 20 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಸನ್ ರೈಸರ್ಸ್ ತಂಡ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ 8 ಪಂದ್ಯಗಳಲ್ಲಿ ಆರ್ ಸಿಬಿ ತಂಡ ಗೆಲುವು ಸಾಧಿಸಿದೆ.
ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಸಾಧಿಸಿದ್ದರೇ ಬೆಂಗಳೂರು ತಂಡ ಒಂದು ಪಂದ್ಯದಲ್ಲಿ ಗೆದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದಾಗ ಸನ್ ರೈಸರ್ಸ್ ಹೈದರಾಬಾದ್ ತಂಡ ಆರು ಬಾರಿ ಗೆದ್ದಿದ್ದರೇ, ಆರ್ ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಸೆಕೆಂಡ್ ಬ್ಯಾಟಿಂಗ್ ಮಾಡಿದಾಗ ಎಸ್ ಆರ್ ಹೆಚ್ ಆರು, ಆರ್ ಸಿಬಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
SRH vs RCB Head to Head Record