IPL 2021 | ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ಸ್ ಗೆ SHR ಸವಾಲ್

1 min read
srh-vs-rr saaksha tv

ರಾಯಲ್ಸ್ಗೆ ಮಾಡು ಇಲ್ಲವೆ ಮಡಿ ಪಂದ್ಯ, ಸನ್ರೈಸರ್ಸ್ಗೆ ಔಪಚಾರಿಕ ಮ್ಯಾಚ್..!

ಸನ್ ರೈಸರ್ಸ್ ತಂಡಕ್ಕೆ ಈ ಐಪಿಎಲ್ ಸೀಸನ್ನಲ್ಲಿ ಏನೂ ಉಳಿದಿಲ್ಲ. ಆದರೆ ಉಳಿದ ತಂಡಗಳ ಹಣೆ ಬರಹ ಬರೆಯುವ ತಾಕತ್ತು ಇದೆ.

ಟೂರ್ನಿಯಿಂದ ಹೊರ ಬಿದ್ದಿರುವ ಸನ್ ರೈಸರ್ಸ್ ಹೈದ್ರಾಬಾದ್ ಈಗ ತನ್ನೊಂದಿಗೆ ಬೇರೆ ತಂಡಗಳ ಅವಕಾಶವನ್ನು ಕಸಿದುಕೊಳ್ಳುವ ಯೋಚನೆಯಲ್ಲಿದೆ.

ಪ್ಲೇ-ಆಫ್ ಯೋಚನೆಯಲ್ಲಿರುವ ರಾಜಸ್ಥಾನ ರಾಯಲ್ಸ್ ಗೆಲುವಿನ ಯೋಚನೆಯಲ್ಲಿದೆ. 9 ಪಂದ್ಯಗಳಿಂದ 8 ಅಂಕ ಪಡೆದಿರುವ ರಾಯಲ್ಸ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಹೈದ್ರಾಬಾದ್9 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದೆ.

ರಾಯಲ್ಸ್ ಈ ಪಂದ್ಯವನ್ನು ಸೋತರೆ ಬಹುತೇಕ ಟೂರ್ನಿಯಿಂದ ಬಿದ್ದಂತೆಯೇ.

ಸನ್ ರೈಸರ್ಸ್ಗೆ ಈ ಸೀಸನ್ ಯಾವುದೂ ಕೂಡ ಕೈ ಹಿಡಿದಿಲ್ಲ. ವಾರ್ನ್ರ್, ವಿಲಿಯಮ್ಸನ್ಮ ಮನೀಷ್ ಪಾಂಡೆ ಸೇರಿದಂತೆ ಯಾವ ಬ್ಯಾಟ್ಸ್ಮನ್ ಕೂಡ ಮಿಂಚಿಲ್ಲ.

srh-vs-rr saaksha tv

ಭುವನೇಶ್ವರ್, ರಶೀದ್ ಸೇರಿದಂತೆ ಬೌಲರ್ಗಳು ಕೂಡ ಕೈ ಹಿಡಿದಿಲ್ಲ ಹೀಗಾಗಿ ಎಸ್ಆರ್ಎಚ್ ಫುಲ್ ಡಲ್ ಆಗಿದೆ. ಪರಿಣಾಮ ಸೋಲಿನ ಮೇಲೆ ಸೋಲು ಕಂಡಿದೆ. ಈಗ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಎಚ್ ಹೆಚ್ಚು ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ಇನ್ನು ರಾಯಲ್ಸ್ಗೆ ಇದು ಮಹತ್ವದ ಪಂದ್ಯ. ಈ ಪಂದ್ಯ ಗೆದ್ರೆ 10 ಅಂಕಗಳೊಂದಿಗೆ ಮುಂದಕ್ಕೆ ಹೋಗಬಹುದು. ಸೋತರೆ ಪ್ಲೇ-ಆಫ್ ಸಾಧ್ಯತೆ ಬಹುತೇಕ ಕಳೆದುಕೊಂಡಂತೆಯೇ.

ಹೀಗಾಗಿ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳು ಶ್ರಮ ಪಡಬೇಕಿದೆ. ಲೆವಿಸ್ ಮತ್ತು ಮೊರಿಸ್ ಗಾಯದಿಂದ ಚೇತರಿಸಿಕೊಂಡರೆ ತಂಡಕ್ಕೆ ಹೆಚ್ಚು ಬಲ ಬರಬಹುದು.

ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಲಕ್ಕೆ ಒಂದು ಸಾಥ್ ಸಿಕ್ಕರೆ’ರಾಯಲ್ಸ್ ನಿರಾಳವಾಗಬಹುದು. ದುಬೈ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಡ್ಯೂ ಮೇಲೂ ಕಣ್ಣಿದೆ. ಒಟ್ಟಿನಲ್ಲಿ ರಾಯಲ್ಸ್ಗೆ ಮಾಡು ಇಲ್ಲವೆ ಮಡಿ ಪಂದ್ಯವಾದೆ, ಹೈದ್ರಾಬಾದ್ ಒತ್ತಡವಿಲ್ಲದೆ ಕಣಕ್ಕಿಳಿಯುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd