ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ಮಹಿಂದಾ ರಾಜಪಕ್ಸೆ…

1 min read

ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ಮಹಿಂದಾ ರಾಜಪಕ್ಸೆ…

ಶ್ರೀಲಂಕಾದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಸೋಮವಾರ ರಾಜೀನಾಮೆ ನೀಡಿದ್ದಾರೆ  ಎಂದು ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.  ಮಧ್ಯಂತರ ಸರ್ಕಾರ ರಚಿಸಬೇಕೆಂಬ ವಿಪಕ್ಷಗಳ ಬೇಡಿಕೆಗೆ ತಲೆಬಾಗಿ ರಾಜಪಕ್ಸೆ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪ್ರಧಾನಿ ರಾಜಪಕ್ಸೆ ಅವರು ಜನರಿಗಾಗಿ “ಯಾವುದೇ ತ್ಯಾಗ” ಮಾಡಲು ಸಿದ್ಧ ಎಂದು ಹೇಳಿಕೆ ನಿಡಿದ್ದರು.  ದೇಶವನ್ನು ಪಾರು ಮಾಡಲು ಮಧ್ಯಂತರ ಸರ್ಕಾರವನ್ನು ರಚಿಸುವಂತೆ ಅವರ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮೇಲೆ ಒತ್ತಡ ಹೆಚ್ಚಾಗಿದೆ.

ತಮ್ಮದೇ ಆದ ಶ್ರೀಲಂಕಾ ಪೊಡುಜನ್ ಪೆರಮುನ್ (ಎಸ್‌ಎಲ್‌ಪಿಪಿ) ಪಕ್ಷದೊಳಗೆ ರಾಜೀನಾಮೆ ನೀಡಲು ಭಾರೀ ಒತ್ತಡವನ್ನು ಎದುರಿಸುತ್ತಿರುವ 76 ವರ್ಷದ ರಾಜಪಕ್ಸೆ, ಇದುವರೆಗೆ ರಾಜೀನಾಮೆ ನೀಡದಂತೆ ಒತ್ತಾಯಿಸಲು ತಮ್ಮ ಬೆಂಬಲಿಗರನ್ನು ಸಜ್ಜುಗೊಳಿಸುತ್ತಿದ್ದರು.

“ಜನರ ಪರವಾಗಿ ಯಾವುದೇ ತ್ಯಾಗಕ್ಕೂ ನಾನು ಸಿದ್ಧ” ಪ್ರಧಾನಿಯವರ ಅಧಿಕೃತ ನಿವಾಸ ‘ಟೆಂಪಲ್ ಟ್ರೀ’ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜಪಕ್ಸೆ ಈ ವಿಷಯ ತಿಳಿಸಿದ್ದರು.

ಪ್ರಧಾನಿ ರಾಜಪಕ್ಸೆ ಅವರ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ನೇತೃತ್ವದ ಸರ್ಕಾರದ ಮೇಲೆ ಪ್ರತಿಪಕ್ಷಗಳ ಒತ್ತಡ ನಿರಂತರವಾಗಿ ಹೆಚ್ಚುತ್ತಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಪ್ರಧಾನಿಯವರ ರಾಜೀನಾಮೆಯು ದೇಶದಲ್ಲಿ ರಾಷ್ಟ್ರೀಯ ಸರ್ಕಾರವನ್ನು ರಚಿಸಲು ಸಹಕಾರಿಯಾಗಬೇಕೆಂದು ರಾಷ್ಟ್ರಪತಿ ಬಯಸುತ್ತಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd