ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಅವೇರಹಳ್ಳಿಯಲ್ಲಿ ನೆಲೆಸಿರುವ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಾಲಯವು ಒಂದು ಪ್ರಮುಖ ಶೈವ ಕ್ಷೇತ್ರವಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3066 ಅಡಿ ಎತ್ತರದಲ್ಲಿರುವ ಏಕಶಿಲಾ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ಬೆಟ್ಟವನ್ನು ಸಾಮಾನ್ಯವಾಗಿ ಎಸ್.ಆರ್.ಎಸ್ ಬೆಟ್ಟ ಎಂದೂ ಕರೆಯುತ್ತಾರೆ.
ಕಲಿಯುಗದ ಆದಿಭಾಗದಲ್ಲಿ ತೆಲಂಗಾಣ ಪ್ರದೇಶದ ಕೊಲನುವಾಕ ಎಂಬ ಊರಿನಲ್ಲಿ ಶ್ರೀ ಸೋಮೇಶ್ವರ ಲಿಂಗದಿಂದ ಉದ್ಭವಿಸುವ ಶ್ರೀ ರೇವಣಸಿದ್ದರು 700 ವರ್ಷಗಳ ಕಾಲ ಲೋಕ ಸಂಚಾರ ಮುಗಿದ ಮೇಲೆ ಮತ್ತೆ 700 ವರ್ಷಗಳ ಕಾಲ ತಪ್ಪಸ್ಸು ಮಾಡಿದ ಕ್ಷೇತ್ರವೇ ಶ್ರೀ ರೇವಣಸಿದ್ದೇಶ್ವರಸ್ವಾಮಿ ಬೆಟ್ಟ ಈ ಸಂಬಂಧವಾಗಿ ಯಾವುದೇ ಶಾಸನಗಳು ಇರುವುದಿಲ್ಲ ಇದು ಹಿಂದಿನಿಂದಲೂ ಅರ್ಚಕರು ಮತ್ತು ಭಕ್ತರಿಂದ ಒಬ್ಬರಿಂದ ಒಬ್ಬರಿಗೆ ಹೇಳಿಕೊಂಡು ಬರುತ್ತಿರುವ ಪ್ರತೀತಿಯಾಗಿದೆ. ಈ ಸಂಬಂಧವಾಗಿ ಕೆಲವು ವಿಚಾರಗಳು ಶ್ರೀ ರೇಣುಕ ವಿಜಯ ಪುಸ್ತಕದಲ್ಲಿ ಕಂಡುಬರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮುಂದುವರೆದು ಒಬ್ಬ ಬೇಟೆಗಾರ ಬೇಟೆಯನ್ನು ಅರಸುತ್ತಾ, ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಬಳಿ ಬಂದಿರಲು ಒಂದು ಉಡವನ್ನು ಕಂಡನು (ಬೆಟ್ಟ ಹತ್ತುವ ಒಂದು ಪ್ರಾಣಿ) ಅದು ಬೆಟ್ಟದ ಶಿಖರವನ್ನೇರಲು ತೊಡಗಿತು ಆಗ ಬೇಟೆಗಾರನ್ನು ಬೆಟ್ಟದಿಂದ ಕೆಳಗೆ ಇಳಿದಿದ್ದ ಬಳ್ಳಿಯ ನೆರವಿನಿಂದ ಬೆಟ್ಟದ ತುದಿಯನ್ನೇರಿದನು, ಅಷ್ಟರಲ್ಲಿ ಶ್ರೀ ರೇವಣಸಿದ್ದರು ತಪಸ್ಸು ಮಾಡುತ್ತಿರುವ ಗವಿಯೊಳಗೆ ಹೊಕ್ಕು ಕತ್ತಲಿನಲ್ಲಿ ಮರೆಯಾಯಿತು. ಅದನ್ನು ಕಂಡ ಬೇಟೆಗಾರ ಕತ್ತಲಲ್ಲೇ ಉಡವನ್ನು ಹುಡುಕ ತೊಡಗಿದನು, ಆಗ ಆತನ ಕೈಗೆ ಒಂದು ಮೃದುವಾದ ಕಲ್ಲಿನ ಪೀಠವು ಸೋಕಿತು, ಆ ಮಹಾತ್ಮರ ಪಾದವನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಉಡವನ್ನು ಪಾದದಿಂದ ಕೀಳಲು ಪ್ರಯತ್ನಿಸಿದಾಗ ಶ್ರೀ ರೇವಣಸಿದ್ದರ ಶರೀರವು ಅಲುಗಾಡಿತು, ಆಗ ಹಲವಾರು ವರ್ಷಗಳ ಕಾಲ ಮುಚ್ಚಿದ ತಮ್ಮ ದಿವ್ಯ ನೇತ್ರಗಳನ್ನು ತೆರೆದರು ಆಗ ಬೇಟೆಗಾರ ಭಯಭೀತನಾಗಿ ಕರ ಜೋಡಿಸಿ ನಿಂತನು. ಆತನನ್ನು ಹತ್ತಿರಕ್ಕೆ ಕರೆದು ಆತನಿಗೆ ಮರ್ಮ ಉಪದೇಶವನ್ನು ಮಾಡಿ ಬಡವನಾದ ಅವನಿಗೆ ಅಪಾರ ಸಿರಿ ಸಂಪತ್ತುಗಳನ್ನು ಲಭಿಸುವಂತೆ ಆಶೀರ್ವದಿಸಿ ತಾವು ತಪಸ್ಸು ಮಾಡುವ ವಿಚಾರವನ್ನು ಯಾರಿಗೂ ತಿಳಿಸಬಾರದೆಂತಲೂ ಅದರಿಂದ ಏಕಾಂತಕ್ಕೆ ಭಂಗಬರುವುದೆಂತಲೂ ಒಂದು ವೇಳೆ ಯಾರಿಗಾದರು ತಿಳಿಸಿದಲ್ಲಿ ಕೆಡುಕಾವುದೆಂದು ಎಚ್ಚರಿಸಿ ಕಳುಹಿಸಿದರು ನಂತರದಲ್ಲಿ ಈ ಬೇಟೆಗಾರ ಅತ್ಯಂತ ಸಿರಿವಂತನಾಗಿ ಮೆರೆಯುತ್ತಿರುವ ರಹಸ್ಯವನ್ನು ತಿಳಿಯುವ ಸಲುವಾಗಿ ತೆಂಗಿನಕಲ್ಲು ಈ ಪ್ರಾಂತ್ಯವನ್ನು ಅಳುತ್ತಿದ್ದ ತೆಂಗಿನ ಕಲ್ಲು ಬೆಟ್ಟದ ಪಾಳೇಗಾರನಾದ ಚಾಮರಸನು ಬೇಟೆಗಾರನ ಪತ್ನಿಯನ್ನು ಅರಮನೆಗೆ ಕರೆಯಿಸಿ ನಿಮಗೆ ಬಂದ ಸಿರಿಯ ರಹಸ್ಯವನ್ನು ತಿಳಿಸಲು ಅಜ್ಞೆ ಮಾಡಿದನು ಇಲ್ಲದಿದ್ದಲ್ಲಿ ದಂಪತಿಗಳಿಬ್ಬರನ್ನು ಶಿರಶ್ಚೇದನ ಮಾಡುವುದಾಗಿ ಎಚ್ಚರಿಸಿ ಕಳುಹಿಸಿದನು. ಆಗ ವಿಧಿ ಇಲ್ಲದೇ ಆ ರಾಜನಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ ಕ್ಷಣದಲ್ಲೇ ಆ ಬೇಟೆಗಾರನು ಅಪಾರವಾದ ಶಿರೋವೇದನೆಯಿಂದ ಮರಣ ಹೊಂದಿದನು ಆಗ ರಾಜನು ಶ್ರೀ ರೇವಣರನ್ನು ಕಾಣಲು ಫಲ ಪುಷ್ಪಗಳೊಂದಿಗೆ ಬೆಟ್ಟವನ್ನೇರಿ ಗುಹೆಯೊಳಗೆ ಹೋಗಿ ನಾನಾ ವಿಧವಾಗಿ ಪೂಜಿಸ ತೊಡಗಿದನು. ಇದರಿಂದ ತೃಪ್ತರಾದ ರೇವಣಸಿದ್ದರು ಕಣ್ಣು ತರೆದು ಆ ರಾಜನಿಗೆ ಧರ್ಮದಿಂದ ಕೀರ್ತಿವಂತನಾಗಿ ರಾಜ್ಯ ಅಳುವಂತೆ ಹರಸಿ ಪ್ರತಿ ವರ್ಷವು ವ್ಯಾಸ ಪೌರ್ಣಮಿಯ ದಿವಸದಂದು ನೀನು ನಿನ್ನ ವಂಶದವರು ಈ ಕ್ಷೇತ್ರದಲ್ಲಿ ಪೂಜೆಯನ್ನು ಉತ್ಸವಾದಿಗಳನ್ನು ನಡೆಸುವಂತೆ ಹಾಗೂ ಯಾವುದೇ ಉತ್ಸವವನ್ನು ಆರಂಭಿಸುವ ಮುನ್ನ ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ತನ್ನ ತಂಗಿ ರೇಣುಕಮ್ಮನವರಿಗೆ ಮೊದಲು ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ನಡೆಸಲು ಅಜ್ಞಾಪಿಸಿದರು. ಅಂದಿನಿಂದ ಶ್ರೀ ರೇವಣಸಿದ್ದೇಶ್ವರಸ್ವಾಮಿ ದೇವಾಲಯವಾಗಿ ಪ್ರಸಿದ್ಧಿ ಹೊಂದಿರುತ್ತದೆ.
ಶ್ರೀ ದೇವಾಲಯವು ಬೆಟ್ಟದ ಒಂದು ಎತ್ತರವಾದ ಕಲ್ಲುಗಳ ಬಂಡೆಯ ಮೇಲೆ ಸುಮಾರು 328 ಅಡಿಗಳಷ್ಟು ಎತ್ತರದಲ್ಲಿದ್ದು, 1100 ಮೆಟ್ಟಿಲುಗಳಿಂದ ಕೂಡಿರುತ್ತದೆ. ಬೆಟ್ಟದ ಮಧ್ಯಭಾಗದಲ್ಲಿ ಶ್ರೀ ಭೀಮೇಶ್ವರಸ್ವಾಮಿ ಮತ್ತ ಶ್ರೀ ಮರುಳು ಸಿದ್ದೇಶ್ವರಸ್ವಾಮಿ ಸನ್ನಿಧಿಗಳು ಇರುತ್ತವೆ.
ದ್ವಾಪರಯುಗದ ಪಾಂಡವರ ಅಜ್ಞಾತವಾಸ ಕಾಲದಲ್ಲಿ ಒಂದು ದಿವಸ ಬೆಟ್ಟದ ಮಧ್ಯಭಾಗದ ಗುಹೆಯಲ್ಲಿ ವಾಸವಿರಲು ಪ್ರಕೃತಿ ಗುಹೆಯನ್ನು ನೋಡಿ ಗುಹೆಯಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಲು ಪಾಂಡವರು ಮನಸ್ಸು ಮಾಡಿ ಭೀಮಸೇನನನ್ನು ಕಾಶಿಗೆ ಕಳುಹಿಸಲು ಮುರ್ಹೂತ ಹತ್ತಿರ ಬರಲು ಭೀಮನು ಲಿಂಗವನ್ನು ತಂದಿರುವುದಿಲ್ಲ.
ಹಿರಿಯರಾದ ಧರ್ಮರಾಯರು ಮರಳಿನಲ್ಲಿ ಒಂದು ಲಿಂಗವನ್ನು ಮಾಡಿ ಪೂಜೆ ಮಾಡುತ್ತಿರಲು, ಭೀಮನು ಕಾಶಿಯಿಂದ ಶಿವಲಿಂಗವನ್ನು ತಂದು ನಾನು ತಂದ ಲಿಂಗಕ್ಕೆ ಮೊದಲ ಪೂಜೆ ಆಗಲಿಲ್ಲವೆಂದು ಕೋಪಿಸಿಕೊಳ್ಳಲು, ಪಾಂಡವರೆಲ್ಲರೂ ಭೀಮನನ್ನು ಸಮಾಧಾನ ಮಾಡಿ ಇನ್ನೂ ಮುಂದೆ ಏನೇ ನೈವೇದ್ಯ ಹಾಗೂ ಮೊದಲ ಪೂಜೆಗಳು ನೀನು ತಂದ ಲಿಂಗಕ್ಕೆ ಆಗಲಿ ಎಂದು ಭೀಮ ತಂದ ಲಿಂಗವನ್ನು ಪ್ರತಿಷ್ಠಾಪಿಸಲು, ಆಗ ಭೀಮಸೇನನ್ನು ಸಮಾಧಾನವಾಗಿ, ಅಲ್ಲಿಂದ ಇಲ್ಲಿಯವರೆಗೆ ಮೊದಲ ಪೂಜೆ ಶ್ರೀ ಭೀಮೇಶ್ವರ ಸ್ವಾಮಿ ಸಲ್ಲುತ್ತಿರುತ್ತದೆ. ಇದು ಶ್ರೀ ಭೀಮೇಶ್ವರಸ್ವಾಮಿ ದೇವಾಲಯವೆಂದು ಪ್ರಸಿದ್ಧಿಯಾಗಿರುತ್ತದೆ.
ಈ ಬೆಟ್ಟದ ಕೆಳಭಾಗದಲ್ಲಿ ಶ್ರೀ ರೇಣುಕಾಂಭೆಯ ಸನ್ನಿಧಿ ಇರುತ್ತದೆ. ಈ ಅಮ್ಮನವರು ಶ್ರೀ ರೇವಣಸಿದ್ದರ ವರಪುತ್ರಿ ಎಂಬುದು ಇಲ್ಲಿನ ಪ್ರತೀತಿ ಶ್ರೀ ರೇವಣಸಿದ್ದೇಶ್ವರರು ಲೋಕ ಸಂಚಾರ ಮಾಡುವಾಗ ಮಾಯದೇವಿ ಎಂಬ ಶಿವಭಕ್ತೆಗೆ ಮಕ್ಕಳು ಇರುವುದಿಲ್ಲ. ಶ್ರೀ ರೇವಣಸಿದ್ದರ ವರದಿಂದ ಶ್ರೀ ರೇಣುಕಾಂಭ ಹುಟ್ಟಿರುತ್ತಾಳೆ. ಅದಕ್ಕೆ ಶ್ರೀ ರೇಣುಕಾಂಭ ಎಂಬ ಹೆಸರು ಇಟ್ಟಿರುತ್ತಾರೆ. ಶ್ರೀ ರೇವಣಸಿದ್ದರು ತಪಸ್ಸಿಗೆ ಅನುಕೂಲವಾದ ಜಾಗವನ್ನು ಹುಡುಕಿಕೊಂಡು ಬಂದಾಗ ರೇಣುಕಾಂಭೆಯು ಅವರನ್ನು ಹಿತಬಾರಿಸಲು, ಆಗ ಸ್ವಾಮಿಯು ಬೆಟ್ಟದ ತಪ್ಪಲಿನಲ್ಲಿ ಕುಳಿತುಕೊಳ್ಳಲು ಹೇಳಿ ತಾನು ತಪಸ್ಸಿಗೆ ಅನುಕೂಲವಾದ ಜಾಗವನ್ನು ಹುಡುಕಿಕೊಂಡು ಬರುವೆನೆಂದು ಹೇಳಲು ಶ್ರೀ ರೇಣುಕಾಂಭ ತಾಯಿಯು ಅಲ್ಲೇ ಶಿಲೆಯಾಗಿ ಬೆಟ್ಟದ ಎದುರು ನೋಡುತ್ತಾ ಈಗಲು ಸಹ ರೇವಣಸಿದ್ದರು ಬರುವುದನ್ನು ಎದುರು ನೋಡುತ್ತಾ ಇರಲು ಶ್ರೀ ರೇಣುಕಾಂಭ ತಾಯಿಯು ಪ್ರಸಿದ್ಧಿ ಹೊಂದಿರುತ್ತಾರೆ.
ಈ ದೇವಾಲಯದಲ್ಲಿ ಭಕ್ತಾಧಿಗಳ ಹರಕೆಯಂತೆ ಅವರ ಇಷ್ಟಾರ್ಥಗಳು ಮತ್ತು ದೋಷಗಳು ಪರಿಹಾರವಾಗಿರುತ್ತದೆ. ದೇವಾಲಯದಲ್ಲಿ ವಿಶೇಷತೆಯ ಬಗ್ಗೆ ಸಾಂಪ್ರದಾಯವಾದ ಪದ್ಧತಿ (ಮೊರೆಸೇವೆ) ಕಲ್ಯಾಣಿಯಿಂದ ನೀರನ್ನು ತಂದು ಪ್ರೋಕ್ಷಿಸುವುದರಿಂದ ಪರಿಹಾರವಾಗುತ್ತದೆ. ಮೊರೆಸೇವೆ ಸ್ನಾನದಿಂದ ಸಂತಾನ ಪ್ರಾಪ್ತಿಗಿರುವ ದೋಷ ಪರಿಹಾರವಾಗುತ್ತದೆ. ತೆಂಗಿನಕಾಯಿಂದ ಮತ್ತು ಯಂತ್ರ, ತಾಯಿತಗಳಿಂದ ದೊಷಗಳು ಪರಿಹಾರವಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿರುತ್ತದೆ. ಇದರಿಂದಲೇ ಪ್ರಸಿದ್ದಿ ಹೊಂದಿರುತ್ತದೆ.
ಬಾಗಿಲು ತೆರೆಯುವ ಸಮಯ
10:00 AM IST – 12:00 PM IST
02:00 AM IST – 02:30 AM IST
ಬಾಗಿಲು ಮುಚ್ಚುವ ಸಮಯ
04:00 AM IST – 04:30 AM IST
ಇತರೆ ಮಾಹಿತಿ:
* ರಾಮನಗರದಿಂದ ಕನಕಪುರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ ದೂರದಲ್ಲಿ ಈ ಬೆಟ್ಟವಿದೆ.
* ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ.
* ಬೆಟ್ಟದ ಪಕ್ಕದಲ್ಲಿ ದೊಡ್ಡದಾದ ದೇವರಕೆರೆ ಎಂಬ ಸುಂದರವಾದ ಕೆರೆಯಿದೆ.
* ಈ ಬೆಟ್ಟವು ಚಾರಣಿಗರು ಮತ್ತು ಬಂಡೆ ಹತ್ತುವವರಿಗೆ ಒಂದು ಜನಪ್ರಿಯ ತಾಣವಾಗಿದೆ.
ಹೀಗೆ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದ್ದು, ಅನೇಕ ಭಕ್ತರನ್ನು ಆಕರ್ಷಿಸುತ್ತಿದೆ.