ಬೆಂಗಳೂರು : ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದ್ದಾರೆ. ರಾಜ್ಯ ಸರ್ಕಾರದ ಬೆನ್ನಿಗೆ ಸಾಕಷ್ಟು ಸಂಘ, ಸಂಸ್ಥೆಗಳು, ದಾನಿಗಳು ನಿಂತು ಸಹಾಯ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅನೇಕ ಜನ ಸಹಾಯ ಮಾಡಿದ್ದಾರೆ.
ಇಂದು ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ವತಿಯಿಂದ ‘ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿ’ಗೆ 5 ಲಕ್ಷ ರೂಪಾಯಿಗಳ ಸಹಾಯ ಮಾಡಲಾಗಿದೆ.
ಮಠದ ಪೀಠಾಧ್ಯಕ್ಷ ಡಾ. ಮಹಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೀಡಿದ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ವೀಕರಿಸಿದರು. ಈ ವೇಳೆ ಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.








