Srirangapatna | ಉರುಸ್ ಆಚರಣೆ ಮೆರವಣಿಗೆಗೆ ವಿರೋಧ
ಶ್ರೀರಂಗಪಟ್ಟಣ : ನಾಳೆ ಶ್ರೀರಂಗಪಟ್ಟಣದಲ್ಲಿ ಉರುಸ್ ಆಚರಣೆ ಹಿನ್ನೆಲೆಯಲ್ಲಿ 30 ರಿಂದ 40 ಸಾವಿರ ಮಂದಿಯಿಂದ ಮೆರವಣಿಗೆ ನಡೆಯುವ ಸಾಧ್ಯತೆಗಳಿವೆ.
ಈ ಮೆರವಣಿಗೆಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ಪ್ರತಿ ವರ್ಷ ಉರುಸ್ ಆಚರಣೆಗೆ 150 ರಿಂದ 200 ಜನ ಸೇರುತ್ತಾ ಇದ್ರು.
ಈ ಬಾರಿ 30 ರಿಂದ 40 ಸಾವಿರ ಮಂದಿ ಮೆರವಣಿಗೆ ಮಾಡಲು ಪ್ಲಾನ್ ಮಾಡಿರುವುದು ಖಂಡನೀಯ.
ಹಿಂದೂ ಸಂಘಟನೆಗಳು ಮೆರವಣಿಗೆ ಮಾಡಿದ್ರೆ ಜಿಲ್ಲಾಡಳಿತ 144 ಸೆಕ್ಷನ್ ಹಾಕುತ್ತೆ.
ನಮಗೆ ಶ್ರೀರಂಗಪಟ್ಟಣ ಪ್ರವೇಶ ಮಾಡಲು ಅವಕಾಶ ನೀಡಲಿಲ್ಲ.

ಮುಸ್ಲಿಂ ಸಂಘಟನೆಗಳು ಮೆರವಣಿಗೆಗೆ ಮುಂದಾದ್ರೆ ಯಾಕೆ ತಡೆಯಲ್ಲ ಎಂದು ಹಿಂದೂ ಸಂಘಟಕರು ಪ್ರಶ್ನೆ ಮಾಡಿದ್ದಾರೆ.
ಕೇರಳ ಮತ್ತು ಇತರೆಡೆಯಿಂದ ಮೆರವಣಿಗೆಗೆ ಬರ್ತಾ ಇದ್ದಾರೆ.
ಇದನ್ನು ಜಿಲ್ಲಾಡಳಿತ ಮೊದಲು ತಡೆಯಬೇಕು ಎಂದು ಹಿಂದೂ ಸಂಘಟಕರು ಒತ್ತಾಯಿಸಿದ್ದು, ನಮಗೆ ಮಾತ್ರ ಕಾನೂನು, ಅವರಿಗೆ ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಮೊದಲು ಈ ಮೆರವಣಿಗೆಯನ್ನು ತಡೆಯಬೇಕು. ಇಷ್ಟು ವರ್ಷ 150 ರಿಂದ 200 ಮಂದಿ ಆಚರಣೆ ಮಾಡುತ್ತಿದ್ರು.
ಈ ಬಾರಿಯೂ ಅದೇ ರೀತಿ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.








