S S Rajamouli | ಆಸ್ಕರ್ ರೇಸ್ ನಲ್ಲಿ ಆರ್ ಆರ್ ಆರ್ ಸಿನಿಮಾ
ನಿರ್ದೇಶಕ ರಾಜಮೌಳಿ ನಿರ್ದೇಶಿಸಿದ ಆರ್ ಆರ್ ಆರ್ ಸಿನಿಮಾ ದೇಶದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಜ್ಯೂನಿಯರ್ ಎನ್ ಟಿ ಆರ್, ರಾಮ್ ಚರಣ್ ನಟಿಸಿದ ಆರ್ ಆರ್ ಆರ್ 1200 ಕೋಟಿ ಕಲೆಕ್ಷನ್ ಮಾಡಿತ್ತು.
ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡ ಈ ಸಿನಿಮಾ ಆಸ್ಕರ್ ಗೆ ಆಯ್ಕೆ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
ಆದ್ರೆ ಎಲ್ಲಾ ನಿರೀಕ್ಷೆಗಳನ್ನು ಉಲ್ಟಾ ಮಾಡುತ್ತಾ ಫಿಲಂ ಫೆಡರೇಷನ್ ಆಫ್ ಇಂಡಿಯಾ ಗುಜರಾತಿ ಮೂವಿ ಚೈಲ್ಲೋ ಶೋ ಸಿನಿಮಾವನ್ನು ಆಸ್ಕರ್ ಗೆ ನಾಮಿನೆಟ್ ಮಾಡಿದೆ.
ಇದರಿಂದ ಎಲ್ಲರೂ ಶಾಕ್ ಗೆ ಗುರಿಯಾದರು. ಆರ್ ಆರ್ ಆರ್ ಸಿನಿಮಾವನ್ನು ಆಸ್ಕರ್ ನಾಮಿನೇಷನ್ ಮಾಡದಿದ್ದಕ್ಕೆ ಸಾಕಷ್ಟು ಮಂದಿ ಬೇಸರಗೊಂಡಿದ್ದರು.
ಇದರಿಂದ ಅಮೆರಿಕಾದಲ್ಲಿ ಆರ್ ಆರ್ ಆರ್ ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡಿದ ವೆರಿಯಲ್ಸ್ ಫಿಲಂ ಸಂಸ್ಥೆ ಈ ಸಿನಿಮಾವನ್ನು ಆಸ್ಕರ್ ನಾಮಿನೇಷನ್ ಗೆ ಪರಿಶೀಲಿಸಬೇಕು ಎಂದು ಅಕಾಡೆಮಿಯನ್ನು ಕೋರಿದೆ.
ಆದ್ರೆ ಆಸ್ಕರ್ ಅಕಾಡಮೆ ರೂಲ್ಸ್ ಪ್ರಕಾರ, ಯಾವುದೇ ಸಿನಿಮಾ ಆಗಲಿ ಲಾಸ್ ಏಂಜಲ್ಸ್ ನಲ್ಲಿ ಇಂಗ್ಲೀಷ್ ಸಬ್ ಟೈಟಿಲ್ಸ್ ಗಳೊಂದಿಗೆ ವಾರದ ಕಾಲ ಪ್ರದರ್ಶನಗೊಂಡರೆ ಆಸ್ಕರ್ ಅವಾರ್ಡ್ ರೇಸ್ ನಲ್ಲಿ ನಿಲ್ಲಬಹುದು.
ಈ ಕ್ರಮದಲ್ಲಿ ಫರ್ ಯುವರ್ ಕನ್ಸಿಡರೇಷನ್ ಅಡಿಯಲ್ಲಿ 15 ವಿಭಾಗದಲ್ಲಿ ಆರ್ ಆರ್ ಆರ್ ಸಿನಿಮಾವನ್ನು ಚಿತ್ರತಂಡ ಕ್ಯಾಂಪೇನ್ ಮಾಡಿದೆ.
ಈ ವಿಷಯವನ್ನು ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.