ಆರ್ ಎಸ್ ಎಸ್ ಬಗ್ಗೆ ತಿಳಿಯಲು ಶಾಖೆಗೆ ಬರಲಿ : ಸಿದ್ದರಾಮಯ್ಯಗೆ ಎಸ್.ಟಿ.ಸೋಮಶೇಖರ್ ಟಾಂಗ್ Siddaramaiah saaksha tv
ಮೈಸೂರು : ಆರ್ ಎಸ್ ಎಸ್ ನದ್ದು ತಾಲಿಬಾನ್ ಸಂಸ್ಕøತಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಬೆಂಕಿಕಾರುತ್ತಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಇದೀಗ ಸಿದ್ದರಾಮಯ್ಯಗೆ ಮಾತಿನ ಚಾಟಿ ಬೀಸಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಸಿದ್ದರಾಮಯ್ಯನವರಿಗೆ ಕೋವಿಡ್ ಬಂದ ಮೇಲೆ ತಾವು ಏನು ಮಾತನಾಡುತ್ತಿದ್ದಾರೆ ಎಂಬುದೇ ಅವರಿಗೆ ಗೊತ್ತಾಗುತ್ತಿಲ್ಲ.
ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬಂಧವೂ ಇಲ್ಲದೆ ಏನೇನೋ ಮಾತನಾಡುತ್ತಿದ್ದಾರೆ.
ಆರ್.ಎಸ್.ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರು ಆರ್.ಎಸ್.ಎಸ್ ಶಾಖೆಗೆ ಬರಲಿ.
ಅವರು ಶಾಖೆಗೆ ಬರುವುದಾದರೆ ನಾನೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಗರಂ ಆದರು.
ಇನ್ನು ಬಾದಾಮಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ, ಬಿಜೆಪಿ ಆರ್ ಎಸ್ ಎಸ್ ಅನ್ನು ಟೀಕಿಸಿದರು.
ಜೊತೆಗೆ ಆರ್ ಎಸ್ ಎಸ್ ತಾಲಿಬಾನ್ ಸಂಸ್ಕøತಿಯನ್ನು ಹೊಂದಿದೆ ಎಂದು ದೂರಿದ್ದರು.
ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಫುಲ್ ಗರಂ ಆಗಿದ್ದು, ಸಿಕ್ಕ ಸಿಕ್ಕಲೆಲ್ಲಾ ಸಿದ್ದರಾಮಯ್ಯ ವಿರುದ್ಧ ವಾಕ್ಬಾಣಗಳನ್ನು ಬಿಡುತ್ತಿದ್ದಾರೆ.








