ವೃದ್ಧೆಯರಿಗೆ ಕೋವಿಡ್ ಲಸಿಕೆ ಬದಲಿಗೆ ಹುಚ್ಚನಾಯಿ ಕಡಿತದ ಲಸಿಕೆ ಕೊಟ್ಟ ಸಿಬ್ಬಂದಿ..!
ಉತ್ತರಪ್ರದೇಶ : ಮೂವರು ವೃದ್ಧ ಮಹಿಳೆಯರಿಗೆ ಕೋವಿಡ್ ಲಸಿಕೆ ನೀಡುವ ಬದಲಾಗಿ ಹುಚ್ಚು ನಾಯಿ ಕಡಿತದ ಲಸಿಕೆ ನೀಡಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಘಟನೆ ಉತ್ತರಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ನಡೆದಿದೆ. ಅನಾರ್ಕಲಿ (72), ಸರೋಜಾ (70), ಸತ್ಯವತಿ (60) ಎನ್ನುವ ಮಹಿಳೆಯರಿಗೆ ರೇಬಿಸ್ ಚುಚ್ಚು ಮದ್ದು ನೀಡಲಾಗಿದೆ.
ಕರೊನಾ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದ ಈ ಮೂವರು ಮಹಿಳೆಯರು 2ನೇ ಮಹಡಿ ಬದಲು ಒಂದನೇ ಮಹಡಿಗೆ ತೆರಳಿದ್ದಾರೆ. ಅಲ್ಲಿದ್ದ ಸಿಬ್ಬಂದಿಯೊಬ್ಬ ಅಪಾರ್ಥ ಮಾಡಿಕೊಂಡು ಈ ಮಹಿಳೆಯರಿಗೆ ರೇಬಿಸ್ ಲಸಿಕೆ ನೀಡಿದ್ದಾನೆ. ಮನೆಗೆ ಹೋದ ನಂತರ ಮೂವರೂ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ವಾಪಸ್ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ತಾವು ರೇಬಿಸ್ ಲಸಿಕೆ ತೆಗೆದುಕೊಂಡಿರುವುದು ಆ ಮಹಿಳೆಯರಿಗೆ ಗೊತ್ತಾಗಿದೆ. ಈ ಕುರಿತು ಶಾಮಿಲಿ ಜಿಲ್ಲಾ ವೈದ್ಯಾಧಿಕಾರಿ ತಪ್ಪು ಲಸಿಕೆ ನೀಡಿದ ಆಸ್ಪತ್ರೆಯ ಔಷಧಾಲಯ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.