2025ರ ಜುಲೈ 1ರಿಂದ ದೇಶದಲ್ಲಿ ಜಮೀನು ಖರೀದಿ ಮತ್ತು ಮಾರಾಟ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಯಾಗಿವೆ. ಕೇಂದ್ರ ಸರ್ಕಾರದ ಈ ಹೊಸ ಕ್ರಮದಿಂದ ಖರೀದಿದಾರರು ಹಾಗೂ ಮಾರಾಟಗಾರರಿಗೆ ಪ್ರಮುಖ ಬದಲಾವಣೆಗಳು ಎದುರಾಗಲಿವೆ. ವಿಶೇಷವಾಗಿ ಮುದ್ರಾಂಕ ಸುಂಕ (Stamp Duty) ಮತ್ತು ನೋಂದಣಿ ಶುಲ್ಕಗಳಲ್ಲಿ ಹೊಸ ದರಗಳನ್ನು ನಿರ್ಧರಿಸಲಾಗಿದೆ.
ಪ್ರಮುಖ ಬದಲಾವಣೆಗಳು ಹೀಗಿವೆ:
ಮುದ್ರಾಂಕ ಸುಂಕದ ದರಗಳು:
₹20 ಲಕ್ಷದವರೆಗೆ ಆಸ್ತಿ ಖರೀದಿಗೆ – 2% ಮುದ್ರಾಂಕ ಸುಂಕ
₹20 ಲಕ್ಷದಿಂದ ₹45 ಲಕ್ಷದವರೆಗೆ – 3% ಮುದ್ರಾಂಕ ಸುಂಕ
₹45 ಲಕ್ಷಕ್ಕಿಂತ ಮೇಲಿನ ಆಸ್ತಿಗೆ – 5% ಮುದ್ರಾಂಕ ಸುಂಕ
ಹೆಚ್ಚುವರಿ cess ಮತ್ತು surcharge ಕೂಡ ಅನ್ವಯವಾಗಲಿದೆ.
ಇವುಗಳು ಹಂತವಾರುವಾಗಿ ಅನ್ವಯವಾಗಲಿದ್ದು, ಗುತ್ತಿಗೆ ಬರವಣಿಗೆ, ಜಮೀನು ಖರೀದಿ, ಆಸ್ತಿ ಮಾರಾಟದ ದಾಖಲೆಗಳನ್ನು ನೋಂದಾಯಿಸುವಾಗ ಈ ದರಗಳನ್ನು ಪಾಲಿಸಬೇಕಾಗುತ್ತದೆ.
ನೋಂದಣಿ ಶುಲ್ಕದಲ್ಲೂ ಬದಲಾವಣೆ:
ಹೊಸ ನಿಯಮಗಳ ಪ್ರಕಾರ ನೋಂದಣಿ ಶುಲ್ಕವನ್ನು ಕೂಡ ಮೊತ್ತದ ಆಧಾರದಲ್ಲಿ ನಿಗದಿಪಡಿಸಲಾಗಿದೆ.
ಇದುವರೆಗೆ ಫಿಕ್ಸ್ ಆಗಿದ್ದ ನೋಂದಣಿ ಶುಲ್ಕವನ್ನು ಇದೀಗ ಶೇಕಡಾವಾರು ಪ್ರಕಾರಕ್ಕೆ ಬದಲಾಯಿಸಲಾಗಿದೆ.
₹20 ಲಕ್ಷದವರೆಗೆ ಆಸ್ತಿಗೆ ನೋಂದಣಿ ಶುಲ್ಕ 1% ಇರಲಿದೆ.
₹45 ಲಕ್ಷಕ್ಕಿಂತ ಹೆಚ್ಚು ಬೆಲೆಯ ಆಸ್ತಿಗೆ 2% ನೋಂದಣಿ ಶುಲ್ಕ ವಿಧಿಸಲಾಗುತ್ತದೆ.
ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟ ಮಾಡುವ ಮೊದಲು ಹೊಸ ಮುದ್ರಾಂಕ ದರಗಳನ್ನು ತಿಳಿದುಕೊಳ್ಳುವುದು ಅಗತ್ಯ.








