ಕೆ.ಆರ್.ಮಾರ್ಕೆಟ್ ನಲ್ಲಿ ವ್ಯಾಪಾರ ವಹಿವಾಟು ಶುರು
ಬೆಂಗಳೂರು : ಕೊರೊನಾ ಕಡಿಮೆ ಹಿನ್ನೆಲೆ ಇಂದಿನಿಂದ ನಗರದ ಕೆ.ಆರ್ ಮಾರ್ಕೆಟ್ ಓಪನ್ ಗೆ ಪಾಲಿಕೆ ಅನುಮತಿ ನೀಡಿದ್ದು, ಬೆಳ್ಳಂಬೆಳಗ್ಗೆಯಿಂದಲೇ ಮಾರ್ಕೆಟ್ ನಲ್ಲಿ ವ್ಯಾಪಾರ ವಹಿವಾಟು ಶುರುವಾಗಿದೆ.
ಅನುಮತಿ ನೀಡಿದ ಮೊದಲ ದಿನವೇ ಹೂವು, ಹಣ್ಣು, ತರಕಾರಿ ಹಾಗೂ ಇತರೆ ಅಂಗಡಿಗಳು ಓಪನ್ ಆಗಿವೆ.
ಆದ್ರೆ ಎಂದಿನಂತೆ ಜನರು ಮಾತ್ರ ಮಾರ್ಕೆಟ್ ನತ್ತ ಮುಖ ಮಾಡಿಲ್ಲ. ಗ್ರಾಹಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಇನ್ನು ಕೆ.ಆರ್.ಮಾರ್ಕೆಟ್ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಕೆ.ಆರ್.ಮಾರ್ಕೆಟ್ ಕೆಸರುಗದ್ದೆಯಾದಂತೆಯಾಗಿದೆ.
ಕೆಆರ್ ಮಾರ್ಕೆಟ್‍ನ ಅವೆನ್ಯೂ ರಸ್ತೆ ಟ್ಯಾಪಿಂಗ್ ಮಾಡಲಾಗುತ್ತಿದ್ದು, ಕಾಮಗಾರಿ ಶುರುವಾಗಿ ಮೂರು ತಿಂಗಳು ಕಳೆದಿದೆ. ಆದ್ರೆ ಟ್ಯಾಪಿಂಗ್ ಕೆಲಸ ಇನ್ನೂ ಮುಗಿದಿಲ್ಲ.
ಇದಲ್ಲದೆ ಕೆಆರ್ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದವರಿಗೆ ಮಾರ್ಷಲ್ಸ್ ದಂಡ ವಿಧಿಸುತ್ತಿದ್ದಾರೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.