ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಪಾನ್ ಕಾರ್ಡ್‌ಗೆ ಸಂಬಂಧಿಸಿ ಮಹತ್ವದ ಮಾಹಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ತನ್ನ ಗ್ರಾಹಕರಿಗೆ ಆನ್ಲೈನ್ ಮಾಧ್ಯಮದ ಮೂಲಕ ಅನೇಕ ಬ್ಯಾಂಕಿಂಗ್ ಕಾರ್ಯಗಳನ್ನು ಮಾಡುವ ಸೌಲಭ್ಯವನ್ನು ನೀಡುತ್ತಿದೆ. ಇದರಿಂದಾಗಿ ಗ್ರಾಹಕರು ಆನ್‌ಲೈನ್ ಮೂಲಕ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವುದು, ಹಣವನ್ನು ವರ್ಗಾಯಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬಹುದು.
ಇದರೊಂದಿಗೆ, ಗ್ರಾಹಕರಿಗೆ ಸೈಬರ್ ಅಪಾಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಬ್ಯಾಂಕ್ ಮಾಡುತ್ತಿದೆ ಮತ್ತು ಕಾಲಕಾಲಕ್ಕೆ ಅವುಗಳನ್ನು ನವೀಕರಿಸುತ್ತಲೇ ಇರುತ್ತದೆ. ಈ ನಡುವೆ, ಅನೇಕ ಸೈಬರ್ ಅಪರಾಧ ತಜ್ಞರು ಬ್ಯಾಂಕುಗಳು ಕಳುಹಿಸುವಂತೆ ಸಂದೇಶಗಳನ್ನು ಕಳುಹಿಸುವ ಮೂಲಕ ಅವರ ಖಾತೆಗಳಿಂದ ಹಣವನ್ನು ಹಿಂತೆಗೆದುಕೊಂಡು ಜನರನ್ನು ಮೋಸದ ಬಲೆಗೆ ಬೀಳಿಸುತ್ತಿರುವ ಕುರಿತು ಎಚ್ಚರಿಕೆ ನೀಡಿದ್ದಾರೆ.

ಈ ದಿನಗಳಲ್ಲಿ, ಎಸ್‌ಬಿಐನ ಅನೇಕ ಗ್ರಾಹಕರು ಪಾನ್ ಕಾರ್ಡ್‌ಗೆ ಸಂಬಂಧಿಸಿದ ಸಂದೇಶವನ್ನು ಪಡೆಯುತ್ತಿದ್ದಾರೆ. ಇದರಲ್ಲಿ ನಿಮ್ಮ ಎಸ್‌ಬಿಐ ಯೋನೋ ಆಪ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಕುರಿತಂತೆ ಬ್ಯಾಂಕ್ ಕೂಡ ಎಚ್ಚರಿಕೆಯನ್ನು ನೀಡಿದ್ದು ಅಂತಹ ಸಂದೇಶಗಳನ್ನು ನಂಬಬೇಡಿ ಎಂದು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.
ನಿಮ್ಮ ಎಸ್‌ಬಿಐ ಯೊನೊ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಸೈಬರ್ ಅಪರಾಧಿಗಳು ಎಸ್‌ಬಿಐ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿ. ಇದರೊಂದಿಗೆ, ಪ್ಯಾನ್ ಕಾರ್ಡ್ ಅನ್ನು ನವೀಕರಿಸಲು ಲಿಂಕ್ ಅನ್ನು ಸಹ ನೀಡಲಾಗುತ್ತಿದ್ದು, ಇದು ಎಸ್‌ಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅಲ್ಲ. ಆದರೆ ಈ ವೆಬ್‌ಸೈಟ್‌ನ ಹೆಸರು ಎಸ್‌ಬಿಐಗೆ ಹೋಲುತ್ತದೆ. ಆದರೆ ಎಸ್‌ಬಿಐನದು ಅಲ್ಲ.
ಈ ಕುರಿತು ಬ್ಯಾಂಕ್ ಹೇಳಿದ್ದೇನು?
ಗ್ರಾಹಕರು ಇಂತಹ ಸಂದೇಶಗಳನ್ನು ಸ್ವೀಕರಿಸಿರುವ ಬಗ್ಗೆ ಟ್ವಿಟರ್ ಮೂಲಕ ಬ್ಯಾಂಕ್ ಗೆ ಮಾಹಿತಿ ನೀಡಿದ್ದು ಈ ಬಗ್ಗೆ ಬ್ಯಾಂಕ್ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಬ್ಯಾಂಕ್, ‘ಈ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಬಳಕೆದಾರರು, ಪಾಸ್‌ವರ್ಡ್, ಡೆಬಿಟ್ ಕಾರ್ಡ್ ಸಂಖ್ಯೆ, PIN, CVV ನಂತಹ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕೇಳುವ ಲಿಂಕ್‌ಗಳು, ಕರೆಗಳು, SMS, ಇಮೇಲ್‌ಗಳಿಗೆ ಪ್ರತಿಕ್ರಿಯಿಸದಂತೆ ನಾವು ನಮ್ಮ ಗ್ರಾಹಕರಿಗೆ ಸಲಹೆ ನೀಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ಇಮೇಲ್ ನಲ್ಲಿ ಫಿಶಿಂಗ್/ಸ್ಮಿಶಿಂಗ್/ವಿಶಿಂಗ್ ಪ್ರಯತ್ನದ ಬಗ್ಗೆ ದೂರು ನೀಡಿ. ನೀವು ಸಹಾಯವಾಣಿ ಸಂಖ್ಯೆ 155269 ಅಥವಾ ಸ್ಥಳೀಯ ಕಾನೂನು ಜಾರಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಬಹುದು ಎಂದು ತಿಳಿಸಿದೆ.
ನೀವು ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅಧಿಕೃತ ಮೂಲಗಳಿಂದ ಪಡೆಯುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು. ಇದಕ್ಕಾಗಿ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಎಲ್ಲಿಂದ ಮಾಹಿತಿಯನ್ನು ಪಡೆಯುತ್ತಿದ್ದೀರಿ ಎಂಬುದನ್ನು ಮೊದಲು ನೋಡಬೇಕು. ಅಲ್ಲದೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಮತ್ತು ಅಜ್ಞಾತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ#Saakshatv #healthtips #Eatingcarrots https://t.co/c6YE6FC3nX
— Saaksha TV (@SaakshaTv) August 21, 2021
ಈ ಆಹಾರ ಪದಾರ್ಥಗಳನ್ನು ಸೇವಿಸುವಾಗ ಎಚ್ಚರಿಕೆ ಇರಲಿ#Saakshatv #healthtipspoison https://t.co/ixY1mPbnPj
— Saaksha TV (@SaakshaTv) August 22, 2021
ಬ್ರೆಡ್ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್#Saakshatv #cookingrecipe https://t.co/zXFiNh1Lga
— Saaksha TV (@SaakshaTv) August 22, 2021
ಕುಟುಂಬ ಪಿಂಚಣಿಯ ಮಿತಿ ತಿಂಗಳಿಗೆ ರೂ 45,000 ದಿಂದ ರೂ1.25 ಲಕ್ಷಕ್ಕೆ ಏರಿಕೆ#familypension https://t.co/723113WFH1
— Saaksha TV (@SaakshaTv) August 22, 2021
ಉದ್ದಿನ ವಡೆ#Saakshatv #cookingrecipe #uddinavade https://t.co/t6kuH0m3kH
— Saaksha TV (@SaakshaTv) August 21, 2021
#StateBank #India #PANcard








