ಮೀಟರ್ ಬಡ್ಡಿ ಸಾಲ ವಸೂಲಿಗೆ ಬ್ರೇಕ್ ಹಾಕಲು ಹೊರಟಿದೆ ರಾಜ್ಯ ಸರ್ಕಾರ..!
ಬೆಂಗಳೂರು: ಮೀಟರ್ ಬಡ್ಡಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಕೊಡಗಿನಲ್ಲಿ ಆಲಿಕಲ್ಲು ಮಳೆ : ಜನರು ಫುಲ್ ಖುಷ್, ಆತಂಕದಲ್ಲಿ ಕೃಷಿಕರು..!
ಈ ಬಗ್ಗೆ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ, ಗೃಹ ಹಾಗೂ ಕಾನೂನು ಸಚಿವ, ಬಸವರಾಜ ಬೊಮ್ಮಾಯಿಯವರು ಕರ್ನಾಟಕ ಮನಿ ಲಾಂಡರಿಂಗ್ ಆಕ್ಟ್ನ ಕಲಂ 38 ಮತ್ತು 39ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದ್ದು, ಈ ಹಿಂದೆ ಒತ್ತಾಯಪೂರ್ವಕ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ನೀಡಲಾಗುತಿತ್ತು, ಆದರೆ ಈಗ 6 ತಿಂಗಳ ಬದಲಾಗಿದೆ ಅದನ್ನು 1 ವರ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ 2ನೇ 2 ವರ್ಷ ಶಿಕ್ಷೆ ಹಾಗೂ 5 ಸಾವಿರದಿಂಧ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಭಾರತದ ಬದ್ಧ ವೈರಿ ರಾಷ್ಟ್ರ ಪಾಕ್ ನ ಇಂಟ್ರೆಸ್ಟಿಂಗ್ ವಿಚಾರಗಳು ನಿಮಗೆ ಗೊತ್ತಾ..!
ಇದೇ ವೇಳೆ ಕರ್ನಾಟಕ ರಾಜ್ಯ ವಿವಾದ ನಿರ್ಣಯ ನೀತಿ 2021ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ರಾಜ್ಯ ಸರ್ಕಾರದ ಪರವಾಗಿ ದಾವೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಲು ಅನುಕೂಲವಾಗುವುದರಿಂದ ಈ ನೀತಿ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.