ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ರೋಗಿಗಳಿಗೆ ಪ್ಲಾಸ್ಮಾ ಥೆರಪಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ನಾಳೆ ಮೊದಲ ರೋಗಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದು, ‘ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಇದಾಗಲಿದೆ’ ಎಂದು ತಿಳಿಸಿದ್ದಾರೆ.
ಇಂದು ಕೇಂದ್ರದ ಆರೋಗ್ಯ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಸೋಂಕು ದೃಢಪಟ್ಟರೆ ಕಳಂಕ ಎಂದು ತಿಳಿದುಕೊಂಡಿದ್ದಾರೆ. ಕೊರೊನಾ ಸಹ ಬೇರೆ ವೈರಸ್ ಥರ ಒಂದು ವೈರಸ್. ಅದರಿಂದ ಸಹಜ ಜ್ವರ ಹೇಗೆ ಬರುತ್ತೋ ಇದೂ ಕೂಡಾ ಹಾಗೆ. ಶೇ.97 ಕೊರೊನಾ ಸೋಂಕಿತರು ವಾಸಿಯಾಗಿದ್ದಾರೆ ಎಂದು ಸುಧಾಕರ್ ಹೇಳಿದರು.
ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ
ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯಲ್ಲಿ ಈಗ ಅನಿರೀಕ್ಷಿತ ರಾಜಕೀಯ ತಿರುವು ಕಂಡುಬಂದಿದೆ. ತನ್ನ ಬಣದ ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದು ಆಘಾತ ನೀಡಿದ...








