ಯುಎಇ ಅಧ್ಯಕ್ಷ ನಿಧನ ಹಿನ್ನೆಲೆ ರಾಜ್ಯಾದ್ಯಂತ 1 ದಿನ  ಶೋಕಾಚರಣೆ…..

1 min read

ಯುಎಇ ಅಧ್ಯಕ್ಷ ನಿಧನ ಹಿನ್ನೆಲೆ ರಾಜ್ಯಾದ್ಯಂತ 1 ದಿನ  ಶೋಕಾಚರಣೆ…..

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅವರು ನಿನ್ನೆ ನಿಧನರಾಗಿರುವ ಹಿನ್ನಲೆಯಲ್ಲಿ  ಭಾರತದಲ್ಲೂ ಸಹ  ದೇಶಾದ್ಯಂತ ಇಂದು ಶೋಕಾಚರಣೆ ಘೋಷಿಸಲಾಗಿದೆ.  ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಅಗಲಿದ ಗಣ್ಯರ ಗೌರವಾರ್ಥ ಇಂದು ಒಂದು ದಿನ ರಾಜ್ಯಾಧ್ಯಂತ ಶೋಕಾಚರಣೆ ಘೋಷಣೆ ಮಾಡಲಾಗಿದೆ.

ಶೇಖ್ ಖಲೀಫಾ ಬಿನ್ ಜಾಯೆದ್ ಅವರು 13-05-2022 ರಂದು ನಿಧನರಾಗಿರುವ ಹಿನ್ನಲೆಯಲ್ಲಿ  ಅಗಲಿದ ಗಣ್ಯರ ಗೌರವಾರ್ಥ ದಿನಾಂಕ  14-05-2022 ರಂದು  ಒಂದು ದಿನ ಶೋಕಾರಚರಣೆ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ  ಕಾರಣದಿಂದ  ರಾಜ್ಯದಲ್ಲೂ 14-05-2022 ರಂದು ಒಂದು ದಿನದ ಮಟ್ಟಿಗೆ  ಶೋಕಾಚರಣೆ ಆಚರಿಸಲಾಗುವುದು.

ಈ ದಿನದಂದು ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಹಾಗು ನಿಯತವಾಗಿ ರಾಷ್ಟ್ರಧ್ವಜವನ್ನ ಹಾರಿಸಲ್ಪಡುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ  ರಾಷ್ಟ್ರ ಧ್ವಜವನ್ನ ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು  ಸರ್ಕಾರ ಅಪರ ಕಾರ್ಯದರ್ಶಿ  ವೀರಭದ್ರ ಹಂಚನಾಳ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd