ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ…
ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿ ಎತ್ತರದ ಕಂಚಿನ ನಾಡಪ್ರಭು ಕೆಂಪೇಗೌಡರ ಕರ್ನಾಟಕದ ಪ್ರಗತಿಯ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ.
ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ಗ್ಲೋಹಟ್ ಸಾಥ್ ನೀಡಿದ್ದಾರೆ. ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ, ಶ್ರೀನಂಜಾವಧೂತ ಸ್ವಾಮೀಜಿ ಉಪಸ್ಥಿತರಿದ್ದರು.
ಈ ಪ್ರಗತಿಯ ಪ್ರತಿಮೆ ಬೆಂಗಳೂರು ನಗರದಲ್ಲೇ ಅತಿ ಎತ್ತರದ ಪ್ರತಿಮೆಯಿದಾಗಿದ್ದು, 85 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ 218 ಟನ್ ಕಂಚು ಹಾಗೂ ಉಕ್ಕು ಬಳಕೆ ಮಾಡಲಾಗಿದೆ. ಖಡ್ಗದ ತೂಕ 4000 ಕೆಜಿ, 120 ಟನ್ ಉಕ್ಕಿನ ಬಳಕೆಯಾಗಿದೆ. ಪ್ರತಿಮೆ ಸುತ್ತಲಿನ ಸ್ಥಳದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ
ಗುಜರಾತ್‌ನ ಏಕತಾ ಪ್ರತಿಮೆ ನಿರ್ಮಿಸಿದ್ದ ಸಂಸ್ಥೆಯಿಂದ ವಿನ್ಯಾಸ ಮಾಡಿಸಲಾಗಿದೆ. ರಾಮ್ ಸುತಾರ್ ಕ್ರಿಯೇಷನ್ಸ್ ವಿನ್ಯಾಸ ರೂಪಿಸಿದ್ಧಾರೆ. ಭೂಕಂಪನವಾದರೂ ಈ ಪ್ರತಿಮೆ ಅಲುಗಾಡೋದಿಲ್ಲ.
Statue of Prosperity : PM Modi unveils the 108-feet bronze statue of Nadaprabhu Kempegowda








