ರಾಯ್ಪುರ: ಛತ್ತೀಸ್‌ಗಢದ (Chhattisgarh) ಮುಂಗೇಲಿ ಜಿಲ್ಲೆಯಲ್ಲಿ ಉಕ್ಕಿನ ಸ್ಥಾವರದ ಸಂಗ್ರಹಣ ಘಟಕ (Silo Collapses) ಕುಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಯಲ್ಲಿ ಸುಮಾರು 25ಕ್ಕೂ ಅಧಿಕ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮುಂಗೇಲಿಯ ಸರಗಾಂವ್ ಪ್ರದೇಶದಲ್ಲಿರುವ ಕುಸುಸ್ಮ್ ಸ್ಟೀಲ್ ಸ್ಥಾವರದಲ್ಲಿ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಬೃಹತ್ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಎತ್ತರದ ಸಿಲಿಂಡರಾಕಾರದ ಕಬ್ಬಿಣದ ಸಂಗ್ರಣ ಘಟಕ ಕುಸಿದು ಬಿದ್ದ ಪರಿಣಾಮ ಈ ಘಟನೆ ನಡೆದಿದೆ. ಹೀಗಾಗಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. 25ಕ್ಕೂ ಅಧಿಕ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು (Police ) ಹಾಗೂ ರಕ್ಷಣಾ ಸಿಬದಿ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.