ಅರ್ಧ ರಾತ್ರಿಯಾದರೂ ನಿದ್ರಿಸದೇ ಈದೇನ್ ಕೆಲ್ಸ ರಾಜಾ..? steve-smith saaksha tv
ಆಶಸ್ ಸರಣಿ ಅಂಗವಾಗಿ ಅಡಿಲೇಡ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಅಂತಿಮ ಹಂತಕ್ಕೆ ಬಂದಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾಂಡಿಂಗ್ ಕ್ಯಾಪ್ಟನ್ ಆಗಿರುವ ಸ್ಟೀವ್ ಸ್ಮಿತ್, ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 473/9 ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಬಿಸಿದ್ದ ಇಂಗ್ಲೆಂಡ್ 236ಕ್ಕೆ ಆಲೌಟ್ ಆಗಿತ್ತು. 237 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ.
https://twitter.com/i/status/1472337400491745287
ಈ ಮಧ್ಯೆ ಆಸ್ಟ್ರೇಲಿಯಾದ ಸ್ಟಾಂಡಿಂಗ್ ನಾಯಕ ಸ್ಮಿತ್ ಅವರ ವಿಡಿಯೋ ವೈರಲ್ ಆಗಿದೆ.
ಪಂದ್ಯದ ಮೇಲೆ ಬಿಗಿ ಹಿಡಿದ ಸಾಧಿಸಿರುವುದರಿಂದ ತಂಡದ ಆಟಗಾರರು ನಿದ್ದೆಗೆ ಜಾರಿದ್ರೆ, ಸ್ಟಾಡಿಂಗ್ ನಾಯಕ ಸ್ಮಿತ್ ಮಾತ್ರ ನಿದ್ದೆ ಮಾಡಿಲ್ಲ. ಅರ್ಧ ರಾತ್ರಿಯಾದರೂ ನಿದ್ರಿಸದ ಸ್ಮಿತ್, ಶ್ಯಾಡೋ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಈ ವಿಡಿಯೋವನ್ನು ಅವರ ಪತ್ನಿ ಡ್ಯಾನಿ ವಿಲ್ಲಿಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.