Stock Market Crashed – ಸೆನ್ಸೆಕ್ಸ್ 1457, ನಿಫ್ಟಿ 427 ಪಾಯಿಂಟ್ ಗಳ ಕುಸಿತ
ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ, ಷೇರುಪೇಟೆ ಕುಸಿತದೊಂದಿದೆಗೆ ಪ್ರಾರಂಭಗೊಂಡಿದೆ. ಎರಡೂ ಸೂಚ್ಯಂಕಗಳು ಸಹ ಭಾರಿ ಕುಸಿತದೊಂದಿಗೆ ಮಾರುಕಟ್ಟೆಗೆ ತೆರದುಕೊಂಡವು. ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ 1457 ಪಾಯಿಂಟ್‌ಗಳ ಕುಸಿತದೊಂದಿಗೆ 52,847 ಕ್ಕೆ ಕೊನೆಗೊಂಡರೆ, ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ 427 ಪಾಯಿಂಟ್‌ಗಳ ಕುಸಿತದೊಂದಿಗೆ 15,774 ಕ್ಕೆ ಕೊನೆಗೊಂಡಿತು.
ಹೂಡಿಕೆದಾರರಿಗೆ 6 ಲಕ್ಷ ಕೋಟಿ ನಷ್ಟ
ಇದಕ್ಕೂ ಮೊದಲು, ಬಿಎಸ್‌ಇ ಸೆನ್ಸೆಕ್ಸ್ 1200 ಪಾಯಿಂಟ್‌ಗಳಿಗಿಂತ ಕೆಳಗೆ ತೆರೆದರೆ, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 16,000 ಮಟ್ಟಕ್ಕಿಂತ ಕೆಳಗೆ ವಹಿವಾಟು ಆರಂಭಿಸಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1700 ಅಂಕಗಳವರೆಗೆ ತಲುಪಿತ್ತು. ಸೋಮವಾರದ ಕುಸಿತದಿಂದಾಗಿ, ಆರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನ ಹೂಡಿಕೆದಾರರು ಕಳೆದುಕೊಂಡಿದ್ದಾರೆ.
ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣಗಳು
1- ಅಮೆರಿಕದಲ್ಲಿ ಹಣದುಬ್ಬರ ದರ
2- US ಭವಿಷ್ಯದ ವ್ಯಾಪಾರದಲ್ಲಿ ದುರ್ಬಲವಾಗಿದೆ
3- ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
4- ಚೀನಾದಲ್ಲಿ ಮತ್ತೆ ಕೊರೊನಾ ಅಪ್ಪಳಿಸಿದೆ