ನಾವು ಭಾರತದ ಮೇಲೆ ಶಾಹೀನ್ ಕ್ಷಿಪಣಿ ಬಳಸಿಲ್ಲ ಎಂದು ಪಾಕ್ ಹೇಳಿಕೊಂಡಿದೆ. ಭಾರತದ ಮೇಲೆ ಶಾಹೀನ್ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಭಾರತೀಯ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿದೆ ಎಂದು ಪಾಕ್ ಆಕ್ರೋಶ ವ್ಯಕ್ತಪಡಿಸಿದೆ.
ಭಾರತೀಯ ಸೇನೆ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ ಒಂದು ವಿಡಿಯೋದಿಂದ ಈ ಆರೋಪಗಳು ಹೆಚ್ಚಾದವು. ಆ ವಿಡಿಯೋ ತೆಗೆದುಹಾಕಿದ ನಂತರವೂ ಅಪಪ್ರಚಾರ ನಿಲ್ಲಲಿಲ್ಲ. ಆಪರೇಷನ್ ಸಿಂಧೂರಿನಲ್ಲಿ ನಡೆದ ಹಿನ್ನಡೆಯನ್ನು ಮುಚ್ಚಲು ಭಾರತ ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ ಎಂದು ಪಾಕ್ ಆರೋಪಿಸಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಥಿತಿ ಉದ್ವಿಗ್ನಗೊಂಡ ಸಮಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಶಾಹೀನ್ ಕ್ಷಿಪಣಿಯನ್ನು ಬಳಸಿತ್ತು ಎಂದು ಭಾರತೀಯ ವಾಯು ಸೇನೆ ಧೃಡಪಡಿಸಿದೆ. ಅಣ್ವಸ್ತ್ರದ ಶಕ್ತಿಯುಳ್ಳ ಶಾಹೀನ್ ಕ್ಷಿಪಣಿಯನ್ನು ಭಾರತದ ವಾಯುಪಡೆಯು ಎಸ್ 400 ಬಳಸಿ ಹೊಡೆದು ಹಾಕಿತ್ತು ಎಂದು ಸೇನಾಮೂಲಗಳು ತಿಳಿಸಿವೆ.








